ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಡಿವಿಎಸ್ ವೃತ್ತದ ಬಳಿ ಇರುವ ಕ್ಲಬ್’ವೊಂದರ ಮೇಲೆ ದಿಢೀರ್ ದಾಳಿ ನಡೆಸಿರುವ ಕೋಟೆ ಪೊಲೀಸರು 12 ಜನರನ್ನು ಬಂಧಿಸಿ, 1,53,200 ರೂ. ವಶಕ್ಕೆ ಪಡೆದಿದ್ದಾರೆ.
READ | ಶಿವಮೊಗ್ಗದಲ್ಲಿ ಕಣ್ಮುಂದೆಯೇ ಬೈಕ್ ಓಡಿಸಿಕೊಂಡು ಹೋದ ಚಾಲಾಕಿ ಕಳ್ಳ
ಕಾನೂನು ಬಾಹಿರವಾಗಿ ಇಸ್ಪೀಟ್
ಕ್ಲಬ್’ನಲ್ಲಿ ಕೆಲವು ಜನರು ಸೇರಿಕೊಂಡು ಕಾನೂನು ಬಾಹಿರವಾಗಿ ಇಸ್ಪೀಟ್ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಕೋಟೆ ಠಾಣೆಯ ಪಿಐ ಟಿ.ಕೆ.ಚಂದ್ರಶೇಖರ್ ನೇತೃತ್ವದಲ್ಲಿ ಸಿಬ್ಬಂದಿಯ ತಂಡವು ದಾಳಿ ಮಾಡಿ ಇಸ್ಪೀಟ್ ಆಡುತ್ತಿದ್ದ 11 ಜನ ಮತ್ತು ಕ್ಲಬ್ ಮ್ಯಾನೇಜರ್ ಸೇರಿ ಒಟ್ಟು 12 ಜನರನ್ನು ಬಂಧಿಸಲಾಗಿದೆ.
ಜೂಜಾಟದಲ್ಲಿ ಪಣವಾಗಿಟ್ಟಿದ್ದ 1,53,200 ರೂ. ನಗದು ಹಣ ಮತ್ತು ಇಸ್ಪೀಟ್ ಕಾರ್ಡ್’ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ಅಕ್ರಮ ಜೂಜಾಟ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://suddikanaja.com/2022/12/12/congress-leader-ramesh-hegde-allegation-against-bjp-at-shivamogga/