Ganja | ತಪಾಸಣೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದ ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ ಯತ್ನ

Meggan Hospital

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತಪಾಸಣೆಗೆಂದು ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದ ವಿಚಾರಣಾಧೀನ ಕೈದಿಗೆ ಗಾಂಜಾ ಮತ್ತು ಮೊಬೈಲ್ ಪೂರೈಸುತ್ತಿದ್ದ ಯತ್ನವನ್ನು ಪೊಲೀಸರು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

READ | ಪದ್ಮಶ್ರೀ ಪುರಸ್ಕೃತ ಹೊಸಹಳ್ಳಿ ಕೇಶವಮೂರ್ತಿ ಇನ್ನಿಲ್ಲ, ಅವರ ಬಗ್ಗೆ ತಿಳಿಯಬೇಕಾದ ವಿಚಾರಗಳಿವು, ಅಮಿತ್ ಶಾ ಸೇರಿ ಗಣ್ಯರ ಸಂತಾಪ, ವಿಶೇಷ ಘಟನೆ ಹಂಚಿಕೊಂಡ ನಾರಾಯಣಗೌಡ

ಆಸ್ಪತ್ರೆಯಲ್ಲಿ ನಡೆದಿದ್ದೇನು?
ವಿಚಾರಣಾಧೀನ ಕೈದಿ ಇಮ್ರಾನ್ ಸೇರಿ ನಾಲ್ವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆಗ ಆಟೋದಲ್ಲಿ‌ ಬಂದಿದ್ದರು ಎನ್ನಲಾದ ಇಬ್ಬರು ಗಾಂಜಾ ಮತ್ತು ಮೊಬೈಲ್ ಪೂರೈಕೆ ಮಾಡಲು ಯತ್ನಿಸಿದರು. ಆಗ ಇದನ್ನು ಗಮನಿಸಿದ ಹೋಮ್ ಗಾರ್ಡ್’ಗಳು ಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

error: Content is protected !!