SC, ST convention | ಚಿತ್ರದುರ್ಗದಲ್ಲಿ ನಡೆಯಲಿದೆ ಬೃಹತ್ ಸಮಾವೇಶ, 5 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ

R dharamasena congress

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೆಪಿಸಿಸಿ ಎಸ್ಸಿ ಘಟಕದ ವತಿಯಿಂದ ರಾಜ್ಯ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಐಕ್ಯತಾ ಸಮಾವೇಶವನ್ನು ಜನವರಿ 8ರಂದು ಚಿತ್ರದುರ್ಗದ ಕಾಲೇಜು ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಎಸ್ಸಿ ಘಟಕದ ಅಧ್ಯಕ್ಷ ಆರ್.ಧರ್ಮಸೇನ್ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಎಂದಿಗೂ ದಲಿತರ ಪರವಾಗಿಯೆ ಇದೆ ಎಂದು ಸಮರ್ಥಿಸಲು ಮತ್ತು ಬಿಜೆಪಿ ದಲಿತರ ವಿರೋಧಿಯಾಗಿದೆ ಎಂದು ತಿಳಿಸುವ ಜಾಗೃತಿ ಮೂಡಿಸುವ ಸಮಾವೇಶ ಇದಾಗಿದೆ. ಸುಮಾರು 5 ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದರು.
ಸಮಾವೇಶದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಎಚ್. ಮುನಿಯಪ್ಪ, ಜಿ. ಪರಮೇಶ್ವರ್, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಆಗಮಿಸಲಿದ್ದಾರೆ.

ಅಡಿಕೆ ಎಲೆಚುಕ್ಕಿ ರೋಗ ತಡೆಯಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಶರಾವತಿ ಮುಳುಗಡೆ ಸಂತ್ರಸ್ತ ಸಮಸ್ಯೆ ಹಾಗೆಯೇ ಇದೆ. ದಲಿತರ ಮನೆಗಳಿಗೆ ಇಂದಿಗೂ ಹಕ್ಕುಪತ್ರ ನೀಡುತ್ತಿಲ್ಲ. ಬಗರ್‌ ಹುಕುಂ ಸಮಸ್ಯೆಯನ್ನು ಜೀವಂತವಾಗಿರಿಸಿದೆ.
ಆರ್.ಧರ್ಮಸೇನ್, ಅಧ್ಯಕ್ಷ, ಕೆಪಿಸಿಸಿ ಎಸ್ಸಿ ಘಟಕ

ಬಿಜೆಪಿಯಿಂದ‌ ಬಣ್ಣದ ಮಾತುಗಳು: ಆರೋಪ
ದಲಿತರು ಬಿಜೆಪಿಯವರ ಮಾತಿಗೆ ಮರುಳಾಗದೆ ಕಾಂಗ್ರೆಸ್‌ನಲ್ಲೇ ಉಳಿಯಬೇಕು. ಬಿಜೆಪಿಯನ್ನು ದೂರ ಇಡಬೇಕು. ಬಿಜೆಪಿ ಮೀಸಲಾತಿಯೂ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುವುದಾಗಿ ಸುಳ್ಳು ಹೇಳುತ್ತದೆ. ದಲಿತರ ಓಟ್ ಬ್ಯಾಂಕ್’ಗಾಗಿ ಆಮೀಷ ತೋರಿಸಲಾಗುತ್ತಿದೆ. ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮುಗ್ಧ ದಲಿತರು ಇದನ್ನೇ ನಿಜವೆಂದು ನಂಬಬಾರದು ಎಂದು ಮನವಿ ಮಾಡಿದರು.

READ | ಶಿವಮೊಗ್ಗದಲ್ಲಿ‌ ಮಹಿಳಾ ಕ್ರಿಕೆಟ್ ಹವಾ, ಹೇಗಿರಲಿದೆ ಪಂದ್ಯಾವಳಿ, ಯಾವೆಲ್ಲ ತಂಡಗಳು ಭಾಗಿ?

ದಲಿತರಿಗೆ ಸರ್ಕಾರಿ ಸೌಲಭ್ಯ, ಅನುದಾನ ನೀಡುತ್ತಿಲ್ಲ. ನೀಡಿದರೂ ಅದನ್ನು ಖರ್ಚು ಮಾಡುತ್ತಿಲ್ಲ. ಶಿಕ್ಷಣವನ್ನು ಕಸಿಯುವ ಕೆಲಸಕ್ಕೆ ಕೈ ಹಾಕಿದೆ. ವಿದ್ಯಾರ್ಥಿ ವೇತನವನ್ನು ನಿಲ್ಲಿಸಲಾಗಿದೆ. ಸೌಲಭ್ಯಗಳು ಹೆಸರಿಗೆ ಮಾತ್ರ ಇವೆ. ಪಡಿತರವನ್ನು ಕೊಡುತ್ತಿಲ್ಲ ಎಂದು ಆರೋಪಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷಕ್ಕೆ ಹಿನ್ನಡೆ ಒಪ್ಪಿಕೊಂಡ ಧರ್ಮಸೇನ್
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿರುವುದು ನಿಜ. ಅದರಲ್ಲೂ ಶಿವಮೊಗ್ಗ ಮೀಸಲು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿನ್ನಡೆ ಸಾಧಿಸಿದೆ. ಇದಕ್ಕಾಗಿ ಪ್ರತಿ ಜಿಲ್ಲೆಗಳಲ್ಲಿ ಮತ್ತು ಮೀಸಲಾತಿ ಕ್ಷೇತ್ರಗಳಲ್ಲಿ ಮತ್ತಷ್ಟು ಸಂಘಟನೆ ಮಾಡಲಾಗುತ್ತಿದೆ. ಜಿಲ್ಲಾಮಟ್ಟದ ಸಭೆಗಳು ಕೂಡ ನಡೆಯುತ್ತಿವೆ. ದಲಿತರನ್ನು ಕಾಂಗ್ರೆಸ್ ಬಿಟ್ಟು ಹೋಗದಂತೆ ನೋಡಿಕೊಳ್ಳಲಾಗುವುದು ಎಂದರು.
ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಪ್ರಮುಖರಾದ ಬಲದೇವಕೃಷ್ಣ, ರವಿ, ವೈ.ಎಚ್. ನಾಗರಾಜ್, ಚಂದ್ರಶೇಖರ್, ನಾಗರಾಜ್, ಸೋಮಣ್ಣ, ಚೇತನ್ ಉಪಸ್ಥಿತರಿದ್ದರು.

https://suddikanaja.com/2022/12/26/sudden-vomiting-and-diarrhea-in-more-than-30-people-people-are-panic/

error: Content is protected !!