ಸುದ್ದಿ ಕಣಜ.ಕಾಂ ಶಿವಮೊಗ್ಗ: ತುಂಗಾ ಕಾಲುವೆಯ ಎರಡೂ ಬದಿಯಲ್ಲಿ ಗಿಡಗಳನ್ನು ನೆಡುವ ಯೋಜನೆ ಇದೆ. ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ನಗರಾಭಿವೃದ್ಧಿ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದೆ.
ನಗರದ ಈಶ್ವರವನಕ್ಕೆ ಮಂಗಳವಾರ ಭೇಟಿ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಗೆ ಒಳಪಡುವ ತುಂಗಾ ಕಾಲುವೆಯ 13 ಕಿಲೋ ಮೀಟರ್ ಪ್ರದೇಶದ ಎರಡೂ ಬದಿ ಗಿಡಗಳನ್ನು ನೆಟ್ಟು ಹಸಿರು ಪರಿಸರ ನಿರ್ಮಾಣ ಮಾಡಲಾಗುವುದು. ಇದರಿಂದ ಭೂ ಒತ್ತುವರಿ ನಿಯಂತ್ರಣ, ಪ್ರದೇಶ ಸದ್ವಳಕೆ ಕೂಡ ಆಗಲಿದೆ ಎಂದು ತಿಳಿಸಿದರು.
ಎಷ್ಟು ಅನುದಾನ: ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯ ಆಯುಕ್ತರು ಇಲಾಖೆಯ ಮುಖ್ಯಸ್ಥರನ್ನು ಬೆಂಗಳೂರಿನಲ್ಲಿ ಸಂಪರ್ಕಿಸಿದ್ದಾರೆ. ಅಂದಾಜು 12.50 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಒಟ್ಟು 70,000 ಗಿಡ ನಡೆಲಾಗುವುದು ಎಂದು ಈಶ್ವರಪ್ಪ ಹೇಳಿದರು.
ಪಾಲಿಕೆ ವ್ಯಾಪ್ತಿಯಲ್ಲಿ 8,600 ಪ್ಲಾಂಟೇಶನ್: ಪಾಲಿಕೆ ವ್ಯಾಪ್ತಿಗೆ ಒಳಪಡುವ ಏಳೆಂಟು ಪ್ರದೇಶಗಳಲ್ಲಿ 8600 ಗಿಡ ನೆಡಲಾಗುವುದು. ಈ ಯೋಜನೆ ಟೆಂಡರ್ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು. ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ್ ವಟಾರೆ, ನಿವೃತ್ತ ಉಪನ್ಯಾಸಕ ಬಿ.ಎಂ.ಕುಮಾರಸ್ವಾಮಿ, ಅಶೋಕ್ ಕುಮಾರ್, ಶಿವಮೊಗ್ಗ ನಂದನ್ ಉಪಸ್ಥಿತರಿದ್ದರು.
ಸುದ್ದಿ ಕಣಜ.ಕಾಂ | DISTRICT | COURT NEWS ಶಿವಮೊಗ್ಗ: ಆಟವಾಡುತಿದ್ದ ಬಾಲಕಿಯನ್ನು ಚಾಕ್ಲೆಟ್ ಕೊಡುತ್ತೇನೆಂದು ಕರೆದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 20 ವರ್ಷ ಕಠಿಣ ಜೈಲು ಕಾರಾಗೃಹ ಶಿಕ್ಷೆ, ಮತ್ತು […]
ಸುದ್ದಿ ಕಣಜ.ಕಾಂ | KARNATAKA | MARKET RATE ಬೆಂಗಳೂರು: ನಿರಂತರ ಏರಿಳಿಕೆ ಕಾಣುತಿದ್ದ ಚಿನ್ನದ ಬೆಲೆಯು ಕಳೆದ ಎರಡು ದಿನಗಳಿಂದ ಮತ್ತೆ ಏರುಗತಿಯಲ್ಲಿ ಸಾಗಿದೆ. ಹೀಗಾಗಿ, ಚಿನ್ನಾಭರಣ ಖರೀದಿ ಮಾಡಬೇಕು ಎಂದುಕೊಂಡವರಿಗೆ […]
ಸುದ್ದಿ ಕಣಜ.ಕಾಂ | DISTRICT | CRIME NEWS ಶಿವಮೊಗ್ಗ: ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಪೊಲೀಸ್ ಪೇದೆಯನ್ನೇ ತಳ್ಳಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಹಾಸನದಲ್ಲಿ ಬಂಧಿಸಿದ್ದಾರೆ. READ | ಶಿವಮೊಗ್ಗ ಪಶುವೈದ್ಯಕೀಯ ಕಾಲೇಜಿನಲ್ಲಿ […]