Suicide | ಶಿವಮೊಗ್ಗದಲ್ಲಿ ಹೃದಯವಿದ್ರಾವಕ ಘಟನೆ, ಒಂದೇ ಕುಟುಂಬದ ಮೂವರು ವಿಷ ಕುಡಿದು ಸಾವು

Doddapete police station

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸಾಲದ ಹೊರೆ ತಾಳದೇ ಒಂದೇ ಕುಟುಂಬದ ಮೂವರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೃದಯವಿದ್ರಾವಕ ಘಟನೆ ಮಿಳಘಟ್ಟದಲ್ಲಿ ನಡೆದಿದೆ.
ಮಿಳ್ಳಘಟ್ಟದ ಪರಂದಯ್ಯ(70) ಮತ್ತು ಅವರ ಪತ್ನಿ ದಾನಮ್ಮ(61), ಪುತ್ರ ಮಂಜುನಾಥ (25) ಮೃತರು. ದಂಪತಿಗೆ ಮಕ್ಕಳಿರಲಿಲ್ಲ ಎಂಬ ಕಾರಣಕ್ಕೆ ಮಂಜುನಾಥ್ ಅವರನ್ನು ದತ್ತು ಪಡೆದಿದ್ದರು. ಮಿಳಘಟ್ಟದಲ್ಲಿ ವಾಸವಾಗಿದ್ದರು.

READ | ಪುಟಾಣಿಗಳಿಗಾಗಿ ಶಿವಮೊಗ್ಗದಲ್ಲಿ ನಡೆಯಲಿದೆ ಗಾಳಿಪಟ ಸ್ಪರ್ಧೆ, ಎಲ್ಲಿ, ಯಾವಾಗ, ಏನೆಲ್ಲ ಕಂಡಿಷನ್?

ಪುತ್ರನಿಗೆ ಅನಾರೋಗ್ಯ, ಸಾಲದ ಹೊರೆ
ದಂಪತಿ ಕೂಲಿ ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದರು. ಇದೇ ಕಾರಣಕ್ಕೆ ಹೊಸಪೇಟೆಗೂ ಹೋಗಿದ್ದರು. ಅಲ್ಲಿಂದ ಮರಳಿದ ಬಳಿಕ ಮಗನಿಗೆ ಸ್ಟ್ರೋಕ್ ಹೊಡೆದಿದ್ದು, ಹಾಸಿಗೆ ಹಿಡಿದಿದ್ದ. ಒಂದೆಡೆ ಚಿಕಿತ್ಸೆ, ಮತ್ತೊಂದೆಡೆ ಬದುಕು ಸಾಗಿಸಲು ಬೇಕಾದ ಹಣ. ಸಾಲ ಕೂಡ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಈ ಕಾರಣಕ್ಕೆ ಮೂವರು ಬುಧವಾರ ರಾತ್ರಿ ಊಟದಲ್ಲಿ ವಿಷ ಮಿಶ್ರಣ ಮಾಡಿ ಸೇವಿಸಿದ್ದಾರೆ ಎಂದು ತಿಳಿದುಬಂದಿದೆ.
ಸಂಬಂಧಿಕರು ಬಂದು ನೋಡಿದಾಗ ಇಬ್ಬರ ಸಾವು
ಗುರುವಾರ ಸಂಜೆ ಸಂಬಂಧಿಕರು ಮನೆಗೆ ಹೋಗಿ ನೋಡಿದಾಗ ದಂಪತಿ ಮೃತಪಟ್ಟಿದ್ದರು. ಮಂಜುನಾಥ ಅಸ್ವಸ್ಥಗೊಂಡು ನರಳುತ್ತಿದ್ದ ಎನ್ನಲಾಗಿದೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಆದರೆ, ಚಿಕಿತ್ಸೆ ಫಲಿಸದೇ ಶುಕ್ರವಾರ ಮೃತಪಟ್ಟಿದ್ದಾನೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!