Court news | ಸಿಲಿಂಡರ್ ಕೊಡಲ್ಲ ಎಂದಿದ್ದಕ್ಕೆ ಮಹಿಳೆಯನ್ನು ಎಳೆದಾಡಿದ ಯುವಕನಿಗೆ ಜೈಲು ಶಿಕ್ಷೆ

Shivamogga Court

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಗ್ಯಾಸ್ ನೀಡಿಲ್ಲವೆಂದು‌ ಯುವಕನೊಬ್ಬ ಮಹಿಳೆಗೆ ಎಳೆದಾಡಿದ್ದಾನೆಂಬ ಕಾರಣಕ್ಕೆ‌‌ ಒಂದು ವರ್ಷ ಸಾದಾ ಕಾರಾವಾಸ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಟಿಪ್ಪು ನಗರದ ಅಪ್ಸರ್ ಪಾಷಾ(26) ಎಂಬಾತ ಶಿಕ್ಷೆಗೆ ಗುರಿಯಾದಾತ.

READ | ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿ

ನಡೆದಿದ್ದೇನು?
ಪರಿಚಯಸ್ಥರಾದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀರಾಮ ನಗರ ಬಡಾವಣೆಯ ವಾಸಿ ಮಹಿಳೆಯೊಬ್ಬರಿಗೆ ಗ್ಯಾಸ್ ಸಿಲಿಂಡರ್ ಅನ್ನು ಕೇಳಿದ್ದು, ಮಹಿಳೆಯು ಕೊಡಲು ಸಾಧ್ಯವಿಲ್ಲವೆಂದು ಹೇಳಿರುತ್ತಾರೆ. ಇದೇ ದ್ವೇಷದ ಹಿನ್ನೆಲೆಯಲ್ಲಿ 2017ರ ಜೂನ್ 2 ರಂದು ಮಧ್ಯಾಹ್ನ ಮಹಿಳೆಯು ತನ್ನ ಅಜ್ಜಿಯೊಂದಿಗೆ ಮನೆಯಲ್ಲಿದ್ದಾಗ ಬಂದು ಜಗಳ ತೆಗೆದು ಕೈ ಹಿಡಿದು ಎಳೆದಾಡಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. ಆಗಿನ ತನಿಖಾಧಿಕಾರಿ ಶಿವಮೊಗ್ಗ ಡಿವೈಎಸ್ಪಿ ಸುದರ್ಶನ್ ಅವರು ಪ್ರಕರಣದ ತನಿಖೆ ಕೈಗೊಂಡು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಧೀಶರಾದ ಬಿ.ಆರ್.ಪಲ್ಲವಿ ಅವರು ಆರೋಪಿ ಅಪ್ಸರ್ ಪಾಶಾ ವಿರುದ್ಧ ಕಲಂ 448, 323 ಐಪಿಸಿ & 3(2) (va) ಎಸ್.ಸಿ & ಎಸ್,ಟಿ (ಪಿಎ) ಕಾಯ್ದೆಯಡಿ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ಪುಷ್ಪ ವಾದ ಮಂಡಿಸಿದ್ದರು.

 

error: Content is protected !!