Arrest | ಶಿವಮೊಗ್ಗದಲ್ಲಿ ಪೊಲೀಸರ ದಿಢೀರ್ ದಾಳಿ, ಇಬ್ಬರ ಬಂಧನ

CRIME NEWS SK

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕಾಮತ್ ಲೇಔಟ್ ಪಕ್ಕದ ಖಾಲಿ ಜಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕೆಳಗಿನ ತುಂಗಾ ನಗರದ ಸೈಫುಲ್ಲಾ ಖಾನ್ ಅಲಿಯಾಸ್ ಸೈಫು(25), ಗೌಸ್ ಪೀರ್ (36) ಬಂಧಿತರು‌. ಆರೋಪಿಗಳ ಬಳಿಯಿಂದ ಅಂದಾಜು ₹10,000 ಮೌಲ್ಯದ 250 ಗ್ರಾಂ ತೂಕದ ಒಣ ಗಾಂಜಾ, ₹380 ನಗದು ಮತ್ತು ಕೃತ್ಯಕ್ಕೆ ಬಳಸಲಾದ 1 ದ್ವಿ ಚಕ್ರವಾಹನವನ್ನು ವಶಕ್ಕೆ ಪಡೆದಿದ್ದಾರೆ.

READ | ಶಿವಮೊಗ್ಗದ ಇಬ್ಬರು ಗೂಂಡಾ ಕಾಯ್ದೆ ಅಡಿ ಅಂದರ್, ಯಾವ ಜೈಲಿಗೆ ಶಿಫ್ಟ್?

ಖಚಿತ ಮಾಹಿತಿ ಮೇರೆ ಪೊಲೀಸರ ದಾಳಿ
ಸಾರ್ವಜನಿಕರಿಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ತುಂಗಾನಗರ ಠಾಣೆ ಪಿಎಸ್.ಐ ರಾಜು ರೆಡ್ಡಿ ಬೆನ್ನೂರು ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಡಿ.ಸಿ.ಆರ್.ಬಿ. ಡಿವೈಎಸ್ಪಿ ಡಿ.ಟಿ.ಪ್ರಭು ನೇತೃತ್ವದಲ್ಲಿ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಅವರ ವಿರುದ್ಧ ಕಲಂ 20(ಬಿ) 8(ಸಿ) ಎನ್.ಡಿ.ಪಿ.ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿದೆ

error: Content is protected !!