Agniveer | ಅಗ್ನಿವೀರ್‌ ವಾಯು ಹುದ್ದೆಗೆ ಅರ್ಜಿ ಆಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಲು ಅವಕಾಶ?

IMG 20220517 232257 102

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಭಾರತೀಯ ವಾಯುಪಡೆ(Indian airforce)ಯ ಅಗ್ನಿಪಥ್‌ ಯೋಜನೆಯಡಿಯಲ್ಲಿ ಅಗ್ನಿವೀರ್‌ (agniveer) ವಾಯು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಭಾರತೀಯ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ನೋಂದಾಯಿಸಲು ಅಧಿಸೂಚನೆ ಹೊರಡಿಸಿದೆ.

READ |ಕೆಪಿಎಸ್.ಸಿಯಿಂದ ಅಧಿಸೂಚನೆ, ಪದವಿ ಪಾಸ್ ಆದವರಿಗೆ ಭರ್ಜರಿ ಉದ್ಯೋಗ ಅವಕಾಶ

ಹೊಂದಿರಬೇಕಾದ ಅರ್ಹತೆಗಳೇನು?
ಅರ್ಜಿ ಸಲ್ಲಿಸಲು ದ್ವಿತೀಯ ಪಿಯುಸಿಯಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಅಥವಾ ಡಿಪ್ಲೋಮಾ ವಿಭಾಗದ (ಮೆಕ್ಯಾನಿಕಲ್‌, ಎಲೆಕ್ಟ್ರಿಕಲ್‌, ಎಲೆಕ್ಟ್ರಾನಿಕ್ಸ್‌, ಆಟೋಮೊಬೈಲ್‌, ಕಂಪ್ಯೂಟರ್‌ ಸೈನ್ಸ್‌, ಇನ್‌ಸ್ಟ್ರುಮೆಂಟ್‌ ಟೆಕ್ನಾಲಜಿ, ಇನ್‌ಫಾರ್ಮೇಷನ್‌ ಟೆಕ್ನಾಲಜಿಯಲ್ಲಿ) ಶೇ.50% ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ವಯಸ್ಸು (26-12-2002 ರಿಂದ 26-06-2006) 17.5 ರಿಂದ 21 ವರ್ಷಗಳನ್ನು ಒಳಗೊಂಡಿರುವ ಅವಿವಾಹಿತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.    
ಆಸಕ್ತ ಅಭ್ಯರ್ಥಿಗಳು ಸಂಪೂರ್ಣ ವಿವರಗಳಿಗೆ ಹಾಗೂ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆಗಾಗಿ https://agnipathvayu.cdac.in  ಜಾಲತಾಣಕ್ಕೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸಲು ಮಾ.31 ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಶಿವಮೊಗ್ಗ ಇವರನ್ನು ನೇರವಾಗಿ ಅಥವಾ ದೂರವಾಣಿ ಸಂಖ್ಯೆ: 08182-255293, 9380663606 ಮೂಲಕ ಸಂಪರ್ಕಿಸಬಹುದೆಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.

Deportation | ಇಬ್ಬರನ್ನು‌ ಗಡಿಪಾರು ಮಾಡಿ ಆದೇಶ, ಒಬ್ಬೊಬ್ಬರ ಮೇಲಿವೆ ಹತ್ತಾರು ಕೇಸ್

error: Content is protected !!