ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗದ ತ್ಯಾವರೆಚಟ್ನಹಳ್ಳಿ ವಿವಿ ಕೇಂದ್ರದಲ್ಲಿ 4ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವ ಕಾರಣ ಕೆಳಕಂಡ ಪ್ರದೇಶದಲ್ಲಿ ಮಾ.28 ರ ಬೆಳಗ್ಗೆ 9.30 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಕುವೆಂಪುನಗರ, ಎನ್.ಇ.ಎಸ್. ಬಡಾವಣೆ, ಶಿವಬಸವನಗರ, ವೀರಭದ್ರೇಶ್ವರ ಬಡಾವಣೆ, ಇಂದಿರಾಗಾಂಧಿ ಬಡಾವಣೆ, ಜ್ಯೋತಿನಗರ, ಜೆ.ಎನ್.ಎನ್.ಸಿ.ಕಾಲೇಜು, ಪರ್ಪೇಕ್ಟ್ ಅಲಾಯಿ ಪ್ಯಾಕ್ಟರಿ, ರೆಡ್ಡಿ ಬಡಾವಣೆ, ಶಾಂತಿನಗರ, ಹೊನ್ನಾಳಿ ರಸ್ತೆ, ತ್ಯಾವರೆಚಟ್ನಹಳ್ಳಿ, ಯು.ಜಿ.ಡಿ., ಶೇಷಾದ್ರಿಪುರಂ, ಲಕ್ಷ್ಮೀ ವೆಂಕಟೇಶ್ವರ ಸಾಮಿಲ್, ತ್ರಿಮೂರ್ತಿನಗರ, ನವುಲೆ, ಅಶ್ವಥ್ನಗರ, ಎಲ್.ಬಿ.ಎಸ್.ನಗರ, ಕೀರ್ತಿನಗರ, ಬಸವೇಶ್ವರನಗರ, ಕೃಷಿನಗರ, ದಡ್ಡರಹಳ್ಳಿ, ತರಳಬಾಳು ಬಡಾವಣೆ, ಸೇವಾಲಾಲ್ನಗರ, ಡಾಲರ್ಸ್ ಕಾಲೋನಿ, ಪವನಶ್ರೀ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
READ | ಮಾಂಸ ಮಾರಾಟಕ್ಕೆಂದು ತಂದಿದ್ದ ಜಾನುವಾರುಗಳ ವಶಕ್ಕೆ, ಎರಡು ಪ್ರತ್ಯೇಕ ಕೇಸ್ ದಾಖಲು
ಮಾ.29 ರಂದು ವಿದ್ಯುತ್ ವ್ಯತ್ಯಯ
ಎಂ.ಆರ್.ಎಸ್. ವಿ ವಿ ಕೇಂದ್ರದಲ್ಲಿ 110/11 ಕೆವಿ ವಿದ್ಯುತ್ ವಾಹಕ ಬದಲಾವಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವ ಕಾರಣ ಕೆಳಕಂಡ ಪ್ರದೇಶದಲ್ಲಿ ಮಾ.29 ರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಹೊಳೆಬೆನವಳ್ಳಿ, ದೊಡ್ಡತಾಂಡ, ಹೊಸಮನೆತಾಂಡ, ಪಿಳ್ಳಂಗಿರಿ, ಜಾವಳ್ಳಿ, ಹಾರೋಬೆನವಳ್ಳಿ, ಬೀರನಹಳ್ಳಿ, ಹೊಯ್ಸನಹಳ್ಳಿ, ಅಬ್ಬರಘಟ್ಟ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.