BJP Join | ಕಾಗೋಡು ಪುತ್ರಿ ಡಾ.ರಾಜನಂದಿನಿ, ಕಟ್ಟಾ ಶಿಷ್ಯ ಹೊನಗೋಡು ಬಿಜೆಪಿ ಸೇರ್ಪಡೆ ಹಿಂದಿನ ಕಾರಣವೇನು?

Kagodu timmappa

 

 

ಸುದ್ದಿ ಕಣಜ.ಕಾಂ ಸಾಗರ
SAGAR: ಹಿರಿಯ ಕಾಂಗ್ರೆಸ್ (congress) ಮುಖಂಡ ಕಾಗೋಡು ತಿಮ್ಮಪ್ಪ (Kagodu Timmappa) ಅವರ ಹಿರಿಯ ಪುತ್ರಿ ಡಾ.ರಾಜನಂದಿನಿ (Dr.Rajanandini) ಹಾಗೂ ಕಟ್ಟಾ ಶಿಷ್ಯ ಹೊನಗೋಡು ರತ್ನಾಕರ್ (Honagodu ratnakar) ಅವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ(BJP Office) ಯಲ್ಲಿ ಬಿಜೆಪಿ ಸೇರ್ಪಡೆಯಾದರು.
ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ(Harathalu halappa), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ಈ ನಿರ್ಧಾರ ಸಾಗರದ ಜನತೆ ಮಾತ್ರವಲ್ಲ ಅವರ ತಂದೆ ಕಾಗೋಡು ಅವರಿಗೂ ಅಚ್ಚರಿಯನ್ನುಂಟು ಮಾಡಿದೆ.

READ | ಆನೆ ದಾಳಿಗೆ ಒಳಗಾಗಿದ್ದ ಡಾ.ವಿನಯ್ ಝಿರೋ ಟ್ರಾಫಿಕ್ ನಲ್ಲಿ ಬೆಂಗಳೂರಿಗೆ ಶಿಫ್ಟ್

ಕಾಗೋಡು ತಿಮ್ಮಪ್ಪ ಹೇಳಿದ್ದೇನು?
“ಕಾಗೋಡು ತಿಪ್ಪಮ್ಮ ಅವರು ಮಗಳ ಈ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ನನ್ನ ಜತೆಗೂ ಮಾತನಾಡಿಲ್ಲ. ಮಗಳ ಈ ನಿರ್ಧಾರದಿಂದ ನನ್ನ ಎದೆಗೆ ಚೂರಿ ಚುಚ್ಚಿದಂತಾಗಿದೆ. ನನ್ನ ಮಗಳು ಇಂತಹ ನಿರ್ಧಾರ ಮಾಡಿತ್ತಾಳೆಂದು ನಿರೀಕ್ಷಿಸಿರಲಿಲ್ಲ’ ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಬಿಜೆಪಿ ಸೇರ್ಪಡೆಗೇನು ಕಾರಣ?
ಕಾಂಗ್ರೆಸ್ಸಿನ ಮೊದಲ ಪಟ್ಟಿ ಇನ್ನೂ ಬಿಡುಗಡೆಯಾಗಿರಲಿಲ್ಲ. ಆಗಲೇ ಸಾಗರ ಮತಕ್ಷೇತ್ರದಿಂದ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ನೀಡಬಾರದು ಎಂದು ಹೈಕಮಾಂಡ್ ಗೆ ಮನವಿ ಮಾಡಲಾಗಿತ್ತು. ಕಾಗೋಡು ಅವರ ನೇತೃತ್ವದಲ್ಲಿ ಹೈಕಮಾಂಡಿಗೆ ಭೇಟಿ ನೀಡಿ ಒತ್ತಡ ಸಹ ಹೇರಲಾಗಿತ್ತು ಎನ್ನುವುದು ಗೌಪ್ಯವಾಗಿ ಉಳಿದಿಲ್ಲ. ಆದರೆ, ಕಾಂಗ್ರೆಸ್ ನಾಯಕರು ಬೇಳೂರು ಅವರನ್ನೇ ಬೆಂಬಲಿಸಿ ಟಿಕೆಟ್ ಸಹ ನೀಡಿದ್ದರು. ಇದಕ್ಕೆ ರಾಜನಂದಿನಿ, ಹೊನಗೋಡು ರತ್ನಾಕರ್, ಮಲ್ಲಿಕಾರ್ಜುನ್ ಹಕ್ರೆ, ಜಯಂತ್ ಇನ್ನಿತರರು ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಬಿಜೆಪಿ ಸೇರ್ಪಡೆಗೆ ಇದೂ ಸಹ ಕಾರಣವಿರಬಹುದು ಎನ್ನಲಾಗುತ್ತಿದೆ.

Shimoga city constituency | ಶಿವಮೊಗ್ಗ ನಗರ ವಿಧಾನಸಭೆ ಕ್ಷೇತ್ರದಲ್ಲಿರುವ ಮತದಾರರೆಷ್ಟು? ಹೊಸ ಮತದಾನ ಕೇಂದ್ರಗಳಿಗೆ ಶಿಫಾರಸು

error: Content is protected !!