Shimoga Polling | ತೀರ್ಥಹಳ್ಳಿಯಲ್ಲಿ ಕಳೆದ ವರ್ಷದಷ್ಟೇ ಓಟಿಂಗ್!, ಕ್ಷೇತ್ರಗಳ ಬಗ್ಗೆ ತಿಳಿದುಕೊಳ್ಳಬೇಕಾದ 4 ವಿಚಾರಗಳಿವು

election evm

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಚುನಾವಣೆ ಆಯೋಗ(Election commission)ವು ಮತದಾನದ ಪ್ರಮಾಣ ಹೆಚ್ಚಿಸುವುದಕ್ಕಾಗಿ ಹಲವು ಪ್ರಯತ್ನಗಳನ್ನು ಮಾಡಿದೆ. ಜಾಗೃತಿ ಕಾರ್ಯಕ್ರಮಗಳನ್ನು ಸಹ ಆಯೋಜಿಸಿತ್ತು. ಸಖಿ ಮತಕೇಂದ್ರ, ಯುವಕರು, ಎಥ್ನಿಕ್, ವಿಶೇಷಚೇತನರಿಗೋಸ್ಕರ ಪ್ರತ್ಯೇಕ ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿತ್ತು. ಚುನಾವಣೆಯನ್ನು ಹಬ್ಬದ ರೂಪದಲ್ಲಿ ಆಚರಿಸಬೇಕೆಂಬ ಕಾರಣಕ್ಕೆ ಮತಗಟ್ಟೆಗಳನ್ನು ಅಲಂಕರಿಸಲಾಗಿತ್ತು. ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಮತದಾರರನ್ನು ಸೆಳೆಯುವುದಕ್ಕೆ ಹಲವು ಪ್ರಯತ್ನಗಳ ಬಳಿಕವು ಜಿಲ್ಲೆಯಲ್ಲಿ 2018ರ ಚುನಾವಣೆಯ ಹೋಲಿಕೆಯಲ್ಲಿ ಶೇ.0.44ರಷ್ಟು ಇಳಿಕೆಯಾಗಿದೆ. 2018ರಲ್ಲಿ ಶೇ.78.72ರಷ್ಟು ಮತದಾನವಾಗಿತ್ತು. 2023ರಲ್ಲಿ ಶೇ.78.28ರಷ್ಟು ಮತದಾನವಾಗಿದೆ.

READ | ಅಪರಾಧ ವಿಭಾಗದ ‘ಗೌರಿ’ ಇನ್ನಿಲ್ಲ, ಚುರುಕು, ಹಲವು ಕೇಸ್’ಗಳನ್ನು ಬೇಧಿಸಿದ್ದ ಪೊಲೀಸ್ ಶ್ವಾನ

ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು

  1. 2018ರ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಶೇ.84.83ರಷ್ಟು ಮತದಾನವಾಗಿತ್ತು. ವಿಪರ್ಯಾಸವೆಂದರೆ, ಈ ಸಲವೂ ಕಳೆದ ಚುನಾವಣೆಯಲ್ಲಿ ಆದಷ್ಟೇ ಮತದಾನವಾಗಿದೆ.
  2. ಭದ್ರಾವತಿಯಲ್ಲಿ 2018ರಲ್ಲಿ ಶೇ.73.13ರಷ್ಟು ಮತದಾನವಾಗಿತ್ತು. 2023ರಲ್ಲಿ ಶೇ.68.47ರಷ್ಟು ಮತದಾನವಾಗಿದ್ದು, ಶೇ.4.66ರಷ್ಟು ಇಳಿಕೆಯಾಗಿದೆ.
  3. ಸೊರಬ ಮತಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಶೇ.84.47ರಷ್ಟು ಮತದಾನವಾಗಿತ್ತು. ಈ ಸಲ ಶೇ.82.97ರಷ್ಟಾಗಿದ್ದು, ಶೇ.1.5ರಷ್ಟು ಮತದಾನ ಕಡಿಮೆಯಾಗಿದೆ.
  4. ಶಿಕಾರಿಪುರದಲ್ಲಿ ಶೇ.0.85, ಶಿವಮೊಗ್ಗದಲ್ಲಿ ಶೇ.2.16, ಶಿವಮೊಗ್ಗ ಗ್ರಾಮಾಂತರದಲ್ಲಿ ಶೇ.2.64, ಶಿಕಾರಿಪುರದಲ್ಲಿ ಶೇ.0.92 ಹಾಗೂ ಸಾಗರದಲ್ಲಿ ಶೇ.0.85ರಷ್ಟು ಮತದಾನದಲ್ಲಿ ಹೆಚ್ಚಳವಾಗಿದೆ.
ವಿಧಾನಸಭೆ ಕ್ಷೇತ್ರ ಶೇಕಡಾವಾರು ಮತದಾನ
ವಿಧಾನಸಭೆ ಕ್ಷೇತ್ರ 2018 2023
ಭದ್ರಾವತಿ 73.13 68.47
ಸಾಗರ 79.35 80.2
ಶಿಕಾರಿಪುರ 81.65 82.57
ಶಿವಮೊಗ್ಗ 66.58 68.74
ಶಿವಮೊಗ್ಗ ಗ್ರಾ. 81.07 83.71
ಸೊರಬ 84.47 82.97
ತೀರ್ಥಹಳ್ಳಿ 84.83 84.83
ಒಟ್ಟು 78.72 78.28

Shimoga Polling | ಮತದಾನದಲ್ಲಿ ಆರಂಭದ ವೇಗ ಕಳೆದುಕೊಂಡ ಭದ್ರಾವತಿ, ಜಿಲ್ಲೆಯಲ್ಲಿ ಭರಾಟೆಯ ಓಟಿಂಗ್

error: Content is protected !!