ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ವಿಧಾನಸಭಾ ಸಾರ್ವತ್ರಿಕ ಚುನಾವಣೆ (karnataka assembly election 2023)ಗೆ ಮೇ 10ರಂದು ನಡೆದ ಮತದಾನದಲ್ಲಿ ಜಿಲ್ಲೆಯಲ್ಲಿ ಶೇ.79.14 ಮತದಾನ ಆಗಿದೆ.
ಮತದಾನದ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕಳೆದ ಚುನಾವಣೆಯಲ್ಲಿ ಜಿಲ್ಲೆಯ ಮತದಾನ ಪ್ರಮಾಣ ಶೇ. 78.72ರಷ್ಟಿತ್ತು. ಈ ಸಲ ಏರಿಕೆಯಾಗಿದೆ.
ಎಷ್ಟು ಜನ ಮತದಾನ ಮಾಡಿದ್ದಾರೆ?
ಜಿಲ್ಲೆಯ 14,72,515 ಮತದಾರರ ಪೈಕಿ 11,65,306 ಮತದಾರರು ಮತದಾನ ಮಾಡಿದ್ದಾರೆ. 7,28,819 ಪುರುಷ ಮತದಾರರ ಪೈಕಿ 5,85,132 ಮತದಾರರು, 7,43,664 ಮಹಿಳಾ ಮತದಾರರ ಪೈಕಿ 5,80,165 ಮತದಾರರು ಹಾಗೂ 32 ಇತರೆ ಮತದಾರರಲ್ಲಿ 5 ಜನರು ಮತದಾನ ಮಾಡಿದ್ದು, ಪುರುಷ ಶೇ.80.28, ಮಹಿಳೆ ಶೇ.78.01 ಮತ್ತು ಇತರೆ ಶೇ.28.13 ಮತದಾನ ಆಗಿದೆ.
READ | ಶಿವಮೊಗ್ಗ ವಿಧಾನಸಭೆ ಕ್ಷೇತ್ರಗಳಮತದಾನದ ಬಗ್ಗೆ ತಿಳಿದುಕೊಳ್ಳಬೇಕಾದ ನಾಲ್ಕು ಅಂಶಗಳಿವು
ಕ್ಷೇತ್ರವಾರು ಮತದಾನದ ಮಾಹಿತಿ
- ಶಿವಮೊಗ್ಗ ಗ್ರಾಮಾಂತರ -111 ರಲ್ಲಿ 105557 ಪುರುಷ ಮತದಾರರಲ್ಲಿ 91038 ಮತದಾರರು(ಶೇ.86.25) ಮತ್ತು 106820 ಮಹಿಳಾ ಮತದಾರರಲ್ಲಿ 88663 ಮಹಿಳೆಯರು(ಶೇ.83) ಇತರೆ 01 ಸೇರಿ ಒಟ್ಟು 179702 ಜನರು(ಶೇ.84.61) ಮತದಾನ ಮಾಡಿದ್ದಾರೆ.
- ಭದ್ರಾವತಿ-112 ರಲ್ಲಿ 103198 ಪುರುಷ ಮತದಾರರಲ್ಲಿ 75715(ಶೇ.73.37) ಮತ್ತು 108962 ಮಹಿಳಾ ಮತದಾರರಲ್ಲಿ 78184(ಶೇ.71.75) ಇತರೆ 01 ಸೇರಿ ಒಟ್ಟು 153900 ಮತದಾರರು(ಶೇ.72.54) ಮತದಾನ ಮಾಡಿದ್ದಾರೆ.
- ಶಿವಮೊಗ್ಗ-113 ರಲ್ಲಿ 127441 ಪುರುಷ ಮತದಾರರಲ್ಲಿ 88883 (ಶೇ.69.74) ಮತ್ತು 133249 ಮಹಿಳಾ ಮತದಾರರಲ್ಲಿ 89310(ಶೇ.67.02) ಮಹಿಳೆಯರು ಇತರೆ 01 ಸೇರಿ ಒಟ್ಟು 178198 ಮತದಾರರು(ಶೇ68.35) ಮತದಾನ ಮಾಡಿದ್ದಾರೆ.
- ತೀರ್ಥಹಳ್ಳಿ-114 ರಲ್ಲಿ 92877 ಪುರುಷ ಮತದಾರರ ಪೈಕಿ 79766(ಶೇ.85.88) ಮತ್ತು 93269 ಮಹಿಳಾ ಮತದಾರರಲ್ಲಿ 80443(ಶೇ.84.44) ಮಹಿಳೆಯರು ಸೇರಿ ಒಟ್ಟು 160209(ಶೇ.85.15) ಮತದಾರರು ಮತದಾನ ಮಾಡಿದ್ದಾರೆ.
- ಶಿಕಾರಿಪುರ-115 ರಲ್ಲಿ 99781 ಪುರುಷ ಮತದಾರರಲ್ಲಿ 84059(ಶೇ.84.24) ಮತ್ತು 99024 ಮಹಿಳಾ ಮತದಾರರಲ್ಲಿ 81359(ಶೇ.82.16) ಮಹಿಳೆಯರು ಸೇರಿ ಒಟ್ಟು 165418(ಶೇ.83.20) ಮತದಾರರು ಮತದಾನ ಮಾಡಿದ್ದಾರೆ.
- ಸೊರಬ-116 ರಲ್ಲಿ 98438 ಪುರುಷ ಮತದಾರರ ಪೈಕಿ 83040(ಶೇ.84.36) ಮತ್ತು 96744 ಮಹಿಳಾ ಮತದಾರರಲ್ಲಿ 80156(ಶೇ.82.85) ಮಹಿಳೆಯರು, ಇತರೆ 01 ಸೇರಿ ಒಟ್ಟು 163197(ಶೇ.83.61) ಮತದಾರರು ಮತದಾನ ಮಾಡಿದ್ದಾರೆ.
- ಸಾಗರ-117 ರಲ್ಲಿ 101527 ಪುರುಷ ಮತರಾರರ ಪೈಕಿ 82631(ಶೇ.81.39) ಮತ್ತು 103596 ಮಹಿಳಾ ಮತದಾರರಲ್ಲಿ 82050(ಶೇ.79.20)ಮಹಿಳೆಯರು ಇತರೆ 01 ಸೇರಿ ಒಟ್ಟು 164682(ಶೇ.80.28) ಮತದಾರರು ಮತದಾನ ಮಾಡಿದ್ದಾರೆ.
- ಶಿವಮೊಗ್ಗ ಗ್ರಾಮಾಂತರ -111 ರಲ್ಲಿ 247 ಮತಗಟ್ಟೆಗಳು, ಭದ್ರಾವತಿ-112 ರಲ್ಲಿ 253, ಶಿವಮೊಗ್ಗ-113 ರಲ್ಲಿ 284 ತೀರ್ಥಹಳ್ಳಿ-114 ರಲ್ಲಿ 258, ಶಿಕಾರಿಪುರ-115 ರಲ್ಲಿ 234, ಸೊರಬ-116 ರಲ್ಲಿ 239, ಸಾಗರ-117 ರಲ್ಲಿ 267 ಮತಗಟ್ಟೆ ಸೇರಿದಂತೆ ಒಟ್ಟು 1782 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ.
Police Dog | ಅಪರಾಧ ವಿಭಾಗದ ‘ಗೌರಿ’ ಇನ್ನಿಲ್ಲ, ಚುರುಕು, ಹಲವು ಕೇಸ್’ಗಳನ್ನು ಬೇಧಿಸಿದ್ದ ಪೊಲೀಸ್ ಶ್ವಾನ