CM Oath  | ರಾಜ್ಯದ 24ನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯ, ಪ್ರಮುಖ ಘೋಷಣೆ ಮಾಡಿದ ಸಿಎಂ

Siddu CM

 

 

ಸುದ್ದಿ ಕಣಜ.ಕಾಂ ಬೆಂಗಳೂರು
SHIVAMOGGA: ಕಂಠೀರವ ಸ್ಟೇಡಿಯಂನಲ್ಲಿ ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾಔರ್ ಚಂದ್ ಗೆಹ್ಲೋಟ್ ಅವರು ಪ್ರಮಾಣ ವಚನ ಬೋಧಿಸಿದರು.

READ | ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ನಿಮಗೇನು ಗೊತ್ತು? ತಿಳಿಯಬೇಕಾದ 6 ವಿಚಾರಗಳಿವು

ಕಾಂಗ್ರೆಸ್‍ಗೆ ನೀಡಿರುವ ಜಯ ನಾಡಿನ 7 ಕೋಟಿ ಕನ್ನಡಿಗರಿಗೆ ಸಿಕ್ಕಿರುವ ಜಯವಾಗಿದೆ. ಜನರ ಆಶೀರ್ವಾದದಿಂದಾಗಿಯೇ ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದಿದೆ. ಪ್ರಚಾರ ಆರಂಭವಾಗಿದ್ದು ಭಾರತ್ ಜೋಡೋ ಪಾದಯಾತ್ರೆ ಮೂಲಕ. ವಿಶೇಷವಾಗಿ ಮಹಿಳೆಯರು, ಯುವಕರು, ರೈತರಿಗೆ ವಿಶೇಷವಾಗಿ ಅಭಿನಂದಿಸುತ್ತೇನೆ. ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನೀಡುತ್ತೇವೆ. ಐದು ಗ್ಯಾರಂಟಿಗಳನ್ನು ಇವತ್ತೇ ಕೆಬಿನೆಟ್ ಸಭೆಯಲ್ಲಿ ಒಪ್ಪಿಗೆ ನೀಡಿ ಜಾರಿಗೆ ತರುತ್ತೇವೆ. ನುಡಿದಂತೆ ನಡೆಯುತ್ತೇವೆ.
– ಸಿದ್ದರಾಮಯ್ಯ, ನೂತನ ಸಿಎಂ

ಯಾರೆಲ್ಲ ಪ್ರಮಾಣ ವಚನ ಸ್ವೀಕಾರ?
ಡಿ.ಕೆ.ಶಿವಕುಮಾರ್ ಅವರು ಡಿಸಿಎಂ ಆಗಿ ಗಂಗಾಧರ್ ಅಜ್ಜನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಜಮೀರ್ ಖಾನ್, ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ ಸೇರಿ ಎಂಟು ಜನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮುಖರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಲವರು ಉಪಸ್ಥಿತರಿದ್ದರು.

Monsoon 2023 | ಈ ವರ್ಷ ನೈರುತ್ಯ ಮುಂಗಾರು ವಿಳಂಬ, ಇನ್ನೂ ಸ್ವಲ್ಪ ದಿನ ಸಹಿಸಿಕೊಳ್ಳಬೇಕಿದೆ ಬಿಸಿಲು, ಕಾರಣವೇನು?

error: Content is protected !!