Police Suspend | ಆಯನೂರಿನ ಬ್ಯಾರ್ ಕ್ಯಾಶಿಯರ್ ಮರ್ಡರ್ ಕೇಸ್, ಇಬ್ಬರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್, ಕಾರಣವೇನು?

112 ERSS

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಆಯನೂರಿನ ಬಾರ್ ಕ್ಯಾಶಿಯರ್ ಕೊಲೆ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, 112 ವಾಹನದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಪೊಲೀಸರ ಸಮ್ಮುಖದಲ್ಲೇ ಕೊಲೆ ನಡೆದಿದ್ದು ಅದನ್ನು ತಡೆಯುವ ಅವಕಾಶವಿದ್ದರೂ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮರೆತಿದ್ದಾರೆ ಎಂಬ ಕಾರಣಕ್ಕೆ ಅಮಾನತುಗೊಳಿಸಲಾಗಿದೆ.

READ | ಚೆಕ್’ಗೆ ನಕಲಿ ಸಹಿ ಹಾಕಿ ಲಕ್ಷಾಂತರ ಹಣ ದುರುಪಯೋಗ, ವ್ಯಕ್ತಿಗೆ ಜೈಲು ಶಿಕ್ಷೆ

ಅಂದು ನಡೆದಿದ್ದೇನು?
ಶಿವಮೊಗ್ಗದಿಂದ ಕೂಗಳತೆ ದೂರದಲ್ಲಿರುವ ಸಾಗರ ಹೆದ್ದಾರಿ ಪಕ್ಕದ ಬಾರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಬಾರ್ ಕ್ಯಾಶಿಯರ್ ಸೊರಬ ಮೂಲದ ಸಚಿನ್ ಕುಮಾರ್(27) ಎಂಬಾತನನ್ನು ಚಾಕು ಚುಚ್ಚಿ ಕೊಲ್ಲಲಾಗಿತ್ತು. ಅದು ಪೊಲೀಸರ ಎದುರುಗಡೆಯೇ ಕೃತ್ಯ ನಡೆದಿದ್ದಕ್ಕೆ ಭಾರಿ ವಿರೋಧವೂ ವ್ಯಕ್ತವಾಗಿತ್ತು.
ಕೊಲೆ ಪ್ರಕರಣದಲ್ಲಿ ಆಯನೂರು ಕೋಟೆ ತಾಂಡದ ನಿರಂಜನ್ ನಾಯ್ಕ್, ಅಶೋಕ್ ನಾಯ್ಕ್ ಮತ್ತು ಸತೀಶ್ ನಾಯ್ಕ್ ಎಂಬುವವರನ್ನು ಬಂಧಿಸಲಾಗಿತ್ತು. ಅದರಲ್ಲಿ ಸತೀಶ್ ಹೊರತುಪಡಿಸಿ ಇಬ್ಬರು ಪೊಲೀಸರ ವಶಕ್ಕೆ ಸಿಕ್ಕಿದ್ದರು. ಸತೀಶ್ ಎಂಬಾತನ್ನು ಬಂಧಿಸಲು ಮುಂದಾದಾಗ ಪಿಎಸ್.ಐ. ಶಿವರಾಜ್ ಅವರ ಮೇಲೆಯೇ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಸ್ವಯಂ ರಕ್ಷಣೆಗೋಸ್ಕರ ಆರೋಪಿ ಕಾಲಿಗೆ ಗುಂಡು ಹಾರಿಸಲಾಗಿತ್ತು. ಗಾಯಗೊಂಡ ಸತೀಶ್’ಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Drinking Water  | ನಾಳೆ, ನಾಡಿದ್ದು ಶಿವಮೊಗ್ಗಕ್ಕೆ ಕುಡಿಯುವ ನೀರು ಪೂರೈಕೆ ಆಗಲ್ಲ, ಕಾರಣವೇನು?

error: Content is protected !!