Cyber crime | ಖಾಸಗಿ ವಿಡಿಯೋ ಎಡಿಟ್ ಮಾಡಿ ಮಾನಸಿಕ ಹಿಂಸೆ, ಆರೋಪಿ ವಿರುದ್ಧ ದಾಖಲಾಯ್ತು ಕೇಸ್

online fraud cyber crime

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಇನ್ ಸ್ಟಾ ಗ್ರಾಂನಲ್ಲಿ ನಕಲಿ ಖಾತೆ ಸೃಷ್ಟಿಸಿ ಯುವತಿಯ ಖಾಸಗಿ ವಿಡಿಯೋಗೆ ಅಶ್ಲೀಲ ವಿಡಿಯೋವನ್ನು ಎಡಿಟ್ ಮಾಡಿದ್ದ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ.

READ | ದೊಡ್ಡಪೇಟೆ ಪೊಲೀಸರ ಕಾರ್ಯಾಚರಣೆ, ಒಬ್ಬ ಅರೆಸ್ಟ್, ಅವನ ಬಳಿಯಿತ್ತು ಲಕ್ಷಾಂತರ ಮೌಲ್ಯದ ಚಿನ್ನಾಭರಣ

20 ವರ್ಷದ ಯುವತಿಯ (ಹೆಸರು ಗೌಪ್ಯವಾಗಿಡಲಾಗಿದೆ) ವಿಡಿಯೋಗೆ ಎಡಿಟ್ ಮಾಡುವ ಮೂಲಕ ಖಾಸಗಿತನಕ್ಕೆ ಭಂಗ ತರಲಾಗಿದೆ. ಉದ್ದೇಶ ಪೂರ್ವಕವಾಗಿ ಅಪ್ ಲೋಡ್ ಮಾಡಿ ಮಾನಸಿಕ ಹಿಂಸೆ ನೀಡುತ್ತಿರುವ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

error: Content is protected !!