Arrest | ಟಿಪ್ಪುನಗರ, ದ್ರೌಪದಮ್ಮ ಸರ್ಕಲ್’ದಲ್ಲಿ‌ ಪ್ರತ್ಯೇಕ ಹಲ್ಲೆ ಪ್ರಕರಣ 10 ಜನರ ಬಂಧನ, ಯಾವುದರಿಂದ ಚುಚ್ಚಲಾಗಿತ್ತು?

NEWS UPDATES

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಟಿಪ್ಪು ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಹಿಂದೂ ಯುವಕನ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಎರಡೂ ಗುಂಪಿನಿಂದ ಒಟ್ಟು ಎಂಟು ಜನರನ್ನು ಬಂಧಿಸಲಾಗಿದೆ.
ಕುಡಿದು ಆಟೋ ನಡೆಸುವಾಗ ಬೈಕಿಗೆ ಡಿಕ್ಕಿ ಹೊಡೆದಿದ್ದು, ಯುವಕರು ಆಟೋ‌ ಹಿಂಬಾಲಿಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಆಗ ಅಲ್ಲಿಯೇ ಇದ್ದ ಅನ್ಯಕೋಮಿನವರಯ ಸಂದೇಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಈ ಘಟನೆಯಲ್ಲಿ ಒಟ್ಟು ಎಂಟು ಜನರನ್ನು ಬಂಧಿಸಲಾಗಿದೆ.

READ | ಕುಸಿದು ಬಿದ್ದ ಸರ್ಕಾರಿ ಶಾಲೆ ಮೇಲ್ಚಾವಣಿ, ಎಲ್ಲಿ ಏನಾಯ್ತು?

ಸ್ಕ್ರೂ ಡ್ರೈವರ್ ನಿಂದ ಚುಚ್ಚಲಾಗಿತ್ತು
ದ್ರೌಪದಮ್ಮ ಸರ್ಕಲ್ ನಲ್ಲಿ ವಿಜಯಕುಮಾರ್ ಎಂಬಾತನಿಗೆ ಸ್ಕ್ರೂಡ್ರೈವರ್ ನಿಂದ ಬೆನ್ನಿಗೆ ಚುಚ್ಚಿದ್ದು, ಆತ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ‌ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಎರಡು ಪ್ರಕರಣದಲ್ಲಿ ಒಟ್ಟು ಹತ್ತು ಜನರನ್ನು ಬಂಧಿಸಲಾಗಿದೆ‌ ಎಂದು ತಿಳಿದುಬಂದಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!