ಸುದ್ದಿ ಕಣಜ.ಕಾಂ ಸಾಗರ
SAGAR: ಇಲ್ಲಿನ ಅರಳಿಕಟ್ಟೆ (Aralikatte) ಗ್ರಾಮದಲ್ಲಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ (Government higher primary school) ಮೇಲ್ಚಾವಣಿ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
ಭಾನುವಾರ ನಸುಕಿನ ಜಾವ ಶಾಲೆಯ ಕೋಣೆಯೊಂದರ ಮೇಲ್ಚಾವಣಿ ಕುಸಿದಿದೆ.
ಶಾಲಾ ತರಗತಿ ನಡೆಯುವಾಗ ಏನಾದರೂ ಈ ಘಟನೆ ಸಂಭವಿಸಿದ್ದರೆ ಅನಾಹುತ ಸಂಭವಿಸುತ್ತಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದ್ದು ಮೇಲ್ಚಾವಣಿ ಕುಸಿದುಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
READ | ಹಿಂದೂ ಯುವಕರ ಮೇಲಿನ ಹಲ್ಲೆ ಪ್ರಕರಣ, ಇದುವರೆಗಿನ ಬೆಳವಣಿಗೆಗಳೇನು?
ಮೂರು ಕೊಠಡಿಗಳಲ್ಲಿ ಪಾಠ
ಎಲ್.ಕೆ.ಜಿಯಿಂದ ಏಳನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ ಬರೀ ಮೂರು ಕೊಠಡಿಗಳಿವೆ. ಇಲ್ಲಿಯೇ ಪಾಠ ಮಾಡಲಾಗುತ್ತಿದೆ. ಕಡಿಮೆ ಕೊಠಡಿಗಳು ಇರುವುದರಿಂದ ಮಕ್ಕಳ ಕಲಿಕೆಗೆ ತೊಂದರೆ ಆಗುತ್ತಿದೆ. ಅದರಲ್ಲಿ ಒಂದು ಕೋಠಡಿಯ ಮೇಲ್ಚಾವಣಿ ಕುಸಿದು ಬಿದ್ದಿರುವುದರಿಂದ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳಲಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.