Inspectors transfer | ಶಿವಮೊಗ್ಗದಿಂದ ಪೊಲೀಸ್ ಇನ್ಸ್’ಪೆಕ್ಟರ್’ಗಳ ವರ್ಗಾವಣೆ, ಯಾರೆಲ್ಲ‌ ಎಲ್ಲಿಗೆ ವರ್ಗ?

police

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದಲ್ಲಿ ವರ್ಗಾವಣೆ ಪರ್ವ ಮುಂದುವರಿದಿದೆ. ಸರ್ಕಾರವು 211 ಪೊಲೀಸ್ ಇನ್ಸ್’ಪೆಕ್ಟರ್‘ಗಳನ್ನು ವರ್ಗಾವಣೆ ಮಾಡಿ‌ ಆದೇಶಿಸಿದೆ‌. ಶಿವಮೊಗ್ಗ ಜಿಲ್ಲೆಯ ಹಲವರು ವರ್ಗಾವಣೆಗೊಂಡಿದ್ದು, ವಿವರ ಇಲ್ಲಿದೆ.

READ | ಶಿವಮೊಗ್ಗದ ಹೋಮ್ ಸ್ಡೇಗಳಿಗೆ ಮಹತ್ವದ ಸೂಚನೆ, ತಪ್ಪಿದ್ದಲ್ಲಿ ನೋಂದಣಿಯೇ ರದ್ದು

ಶಿವಮೊಗ್ಗದಿಂದ ಯಾರೆಲ್ಲ ವರ್ಗಾವಣೆ?

  1. ಶಿಕಾರಿಪುರ ಗ್ರಾಮಾಂತರ ಠಾಣೆಯಿಂದ ಜೆ.ಲಕ್ಷ್ಮಣ್‌ ಅವರನ್ನು‌ ಬೆಂಗಳೂರಿನ ನಂದಿನಿ ಲೇಔಟ್‌’ಗೆ ವರ್ಗಾವಣೆ ಮಾಡಲಾಗಿದೆ.
  2. ತೀರ್ಥಹಳ್ಳಿ ಪೊಲೀಸ್‌ ಠಾಣೆಯಿಂದ ಜೆ.ಅಶ್ವಥಗೌಡ ಅವರನ್ನು ಬೆಂಗಳೂರಿನ ಜ್ಞಾನಭಾರತಿ ಠಾಣೆಗೆ ವರ್ಗಾಯಿಸಲಾಗಿದೆ.
  3. ತೀರ್ಥಹಳ್ಳಿಯ ಮಾಳೂರು ಠಾಣೆಯಿಂದ ಪ್ರವೀಣ್‌ ಜಿ. ನೀಲಮ್ಮನವರ್‌ ಅವರನ್ನು ಹುಬ್ಬಳ್ಳಿ ಧಾರವಾಡ ಗೋಕುಲ್‌ ರೋಡ್‌ ಠಾಣೆಗೆ ವರ್ಗ.
  4. ಭದ್ರಾವತಿ ನಗರ ವೃತ್ತದಿಂದ ರಾಘವೇಂದ್ರ ಕಾಂಡಿಕೆ ಅವರನ್ನು ಚಿತ್ರದುರ್ಗದ ಹಿರಿಯೂರು ಠಾಣೆಗೆ ವರ್ಗಾಯಿಸಲಾಗಿದೆ.
  5. ವಿನೋಬನಗರ ಪೊಲೀಸ್‌ ಠಾಣೆಯಿಂದ ಎನ್‌.ಎಸ್‌.ರವಿ ಅವರನ್ನು ದಾವಣಗೆರೆ ಜಿಲ್ಲೆ ನ್ಯಾಮಿತ ಠಾಣೆಗೆ ವರ್ಗ
  6. ಹೊಸನಗರ ಪೊಲೀಸ್‌ ಠಾಣೆಯಿಂದ ಬಿ.ಸಿ.ಗಿರೀಶ್‌ ಅವರನ್ನು ಪಾವಗಡ ಗ್ರಾಮಾಂತರ ಠಾಣೆಗೆ ವರ್ಗ.
  7. ಸಾಗರ ಗ್ರಾಮಾಂತರ ಠಾಣೆಯಿಂದ ವಿ.ಪ್ರವೀಣ್‌ ಕುಮಾರ್‌ ಹಾವೇರಿ ಜಿಲ್ಲೆ ರಾಣೇಬೆನ್ನೂರು ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ.
  8. ರಾಜ್ಯ ಗುಪ್ತವಾರ್ತೆಯಿಂದ ಶ್ರೀಶೈಲಕುಮಾರ್‌ ಅವರನ್ನು ಭದ್ರಾವತಿ ನಗರ ವೃತ್ತಕ್ಕೆ ವರ್ಗಾಯಿಸಲಾಗಿದೆ.
  9. ಭಟ್ಕಳ ಗ್ರಾಮಾಂತರ ಠಾಣೆಯಿಂದ ಮಹಾಬಲೇಶ್ವರ್‌ ಎಸ್‌.ನಾಯಕ್‌ ಅವರನ್ನು ಸಾಗರ ಗ್ರಾಮಾಂತರ ಪೊಲೀಸ್‌ ಠಾಣೆಗೆ ವರ್ಗ.
  10. ಹಾವೇರಿ ಜಿಲ್ಲೆ ಹಿರೇಕೆರೂರು ಠಾಣೆಯಿಂದ ರುದ್ರೇಗೌಡ ರೇವಣಗೌಡ ಪಾಟೀಲ್‌ ಅವರನ್ನು ಶಿವಮೊಗ್ಗದ ವಿನೋಬನಗರ ಠಾಣೆಗೆ ವರ್ಗ
  11. ಭಾಲ್ಕಿ ನಗರ ಠಾಣೆಯಿಂದ ಗುರಣ್ಣ ಎಸ್‌.ಹೆಬ್ಬಾಳ್‌ ಅವರನ್ನು ಹೊಸನಗರ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

error: Content is protected !!