Social media | ವಾಟ್ಸಾಪ್, ಫೇಸ್ಬುಕ್ ಗ್ರೂಪ್ ಅಡ್ಮಿನ್’ಗಳೇ ಎಚ್ಚರ! ಶಿವಮೊಗ್ಗ ಪೊಲೀಸರು ಹೇಳಿದ್ದೇನು?

Social media

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ‌ಪೊಲೀಸರು (Shimoga police) ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿದ್ದಾರೆ‌. ಹೀಗಾಗಿ, ಪೋಸ್ಟ್ ಮಾಡಬೇಕಾದರೆ ಹುಷಾರ್!
ವೈರಲ್ ವಿಡಿಯೋ ಶೇರ್ ಮಾಡುವ‌ ಮುನ್ನ ಯೋಚಿಸಿ

READ | ಆನಂದಪುರಂ- ಕುಂಸಿ ರೈಲ್ವೆ ನಿಲ್ದಾಣಗಳ ಮಧ್ಯೆ ವ್ಯಕ್ತಿ ಸಾವು, ಎಡಗೈಯಲ್ಲಿ ಹದ್ದಿನ ಚಿತ್ರ

ಹೊರ ರಾಜ್ಯಗಳಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸದರಿ ವೀಡಿಯೋ ತುಣುಕುಗಳು ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ವಿಡಿಯೋಗಳು ಆಗಿರುವುದಿಲ್ಲ. ನೈಜ ಸುದ್ದಿಗಳನ್ನು ತಿರುಚಿ Facebook, WhatsApp, Instagram, Twitter ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಿವುದು ಕಾನೂನು ರೀತ್ಯಾ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಪೊಲೀಸ್ ಇಲಾಖೆಯಿಂದ ನಿರಂತರವಾಗಿ ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇಡಲಾಗಿದ್ದು, ಯಾವುದೇ ಪ್ರಚೋದನಾತ್ಮಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಾಗ, ವಿಡಿಯೋಗಳನ್ನು ಹರಿಬಿಟ್ಟ ವ್ಯಕ್ತಿಗಳು ಈ ಬಗ್ಗೆ ಪೊಲೀಸ್ ಇಲಾಖೆಗೆ ಸೂಕ್ತ ಸ್ಪಷ್ಟನೆಯನ್ನು ಸಹ ನೀಡಬೇಕಿರುತ್ತದೆ. ಒಂದುವೇಳೆ ಕಾನೂನು ಉಲ್ಲಂಘನೆ ಮಾಡಿರುವುದು ಕಂಡುಬಂದಲ್ಲಿ, ಅಂತಹ ವ್ಯಕ್ತಿಗಳು ಮತ್ತು ಗ್ರೂಪ್ ಅಡ್ಮಿನ್ ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಇಲಾಖೆಯಿಂದ ಸ್ಪಷ್ಟನೆ ಪಡೆಯಿರಿ
ಸಾರ್ವಜನಿಕರು ಯಾವುದೇ ರೀತಿಯ ಸುಳ್ಳುಸುದ್ಧಿಗಳಿಗೆ ಕಿವಿಗೊಡಬಾರದು. ಪ್ರಚೋದನೆಗೆ ಒಳಗಾಗಬಾರದು. ಯಾವುದೇ ಸುಳ್ಳು, ಪ್ರಚೋದನಾತ್ಮಕ ವೀಡಿಯೋ, ಪೋಸ್ಟ್, ಸುದ್ಧಿಗಳ ಸತ್ಯತೆಯನ್ನು ತಿಳಿಯದೇ ಫಾರ್ವರ್ಡ್ / ಪೋಸ್ಟ್ / ಟ್ವೀಟ್ ಮಾಡಬೇಡಿ ಮತ್ತು ಸತ್ಯತೆಗಾಗಿ ಪೊಲೀಸ್ ಇಲಾಖೆಯಿಂದ ಸ್ಪಷ್ಟನೆಯನ್ನು ಪಡೆದುಕೊಳ್ಳುವುದು.

error: Content is protected !!