Job Recruitment | ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಐದು ದಿನವಷ್ಟೇ ಬಾಕಿ

IMG 20220517 232257 102

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸರ್ಕಾರದ ಸೂಚನೆಯನ್ವಯ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಸರ್ಕಾರಿ ಅಭಿಯೋಜಕರು-ವ-ಸರ್ಕಾರಿ ವಕೀಲರ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

READ |  ತೋಟಕ್ಕೆ ತೆರಳಿದ್ದ ಮಹಿಳೆ ಮೇಲೆ ಚಿರತೆ ಅಟ್ಯಾಕ್, ಹುಡುಕಲು‌ ಹೋದಾಗ ಶವ ಪತ್ತೆ, ಅರಣ್ಯಾಧಿಕಾರಿಗಳೇನು ಹೇಳಿದರು?

ವಕೀಲ ವೃತ್ತಿಯನ್ನು ಪೂರೈಸಿದ ಅನುಭವ ಹೊಂದಿರುವ ಅರ್ಹ ನ್ಯಾಯವಾದಿಗಳು ವೈಯಕ್ತಿಕ ಮಾಹಿತಿಯೊಂದಿಗೆ ಅರ್ಜಿ ಸಿದ್ದಪಡಿಸಿ ಆ. 14ರ ಸಂಜೆ 5 ಗಂಟೆಯೊಳಗೆ ಸರ್ಕಾರಿ ಅಭಿಯೋಜಕರು, ಸರ್ಕಾರಿ ಅಭಿಯೋಜಕರ ಕಚೇರಿ, 4ನೇ ಮಹಡಿ, ಹೆಚ್ಚುವರಿ ನ್ಯಾಯಾಲಯಗಳ ಸಂಕೀರ್ಣ, ಬಾಲರಾಜ ಅರಸ್ ರಸ್ತೆ, ಶಿವಮೊಗ್ಗ ಈ ಕಚೇರಿಗೆ ಸಲ್ಲಿಸಬೇಕು.
ಅರ್ಜಿಯೊಂದಿಗೆ ಈ ದಾಖಲೆ ಸಲ್ಲಿಸಿ
ಅರ್ಜಿಯ ಜೊತೆ ಸ್ವಯಂ ದೃಢೀಕರಿಸಿದ ಎಸ್‍ಎಸ್‍ಎಲ್‍ಸಿ/ತತ್ಸಮಾನ ಅಂಕಪಟ್ಟಿ ಪ್ರತಿ, ಎಲ್‍ಎಲ್‍ಬಿ ಪದವಿಯ ಪ್ರತೀ ವರ್ಷದ/ ಸೆಮಿಸ್ಟರ್ ಅಂಕಪಟ್ಟಿಗಳ ಪ್ರತಿಗಳು, ವಕೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ವಕೀಲರಾಗಿ ನೋಂದಣಿ ಆದ ಬಾರ್ ಕೌನ್ಸಿಲ್‍ರವರು ನೀಡಿದ ಸನ್ನದಿನ ಪ್ರತಿ, ವಕೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ವಕೀಲರ ಸಂಘದಿಂದ ಪಡೆದ ಪ್ರಮಾಣ ಪತ್ರದ ಪ್ರತಿ, ನ್ಯಾಯಾಲಯದ ಪೀಠಾಸೀನ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರದ ಪ್ರತಿ, ಮೀಸಲಾತಿಗೆಸಂಬಂಧಿಸಿದ ಜಾತಿ/ಪ್ರವರ್ಗಕ್ಕೆ ಸೇರಿದ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರವು ನೀಡಿದ ಜಾತಿ/ಆದಾಯ ಪ್ರಮಾಣ ಪತ್ರ ಇತರೆ ದಾಖಲಾತಿಗಳನ್ನು ಸಲ್ಲಿಸುವುದು.
ಹೆಚ್ಚಿನ ಮಾಹಿತಿಗೆ ದೂ.ಸಂ: 9448544214/7892311800 ನ್ನು ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದ್ದಾರೆ.

Job in shimoga | ಎಪಿಪಿ, ವಕೀಲರ ಹುದ್ದೆ, ಗ್ರಾಮೀಣ ಅಂಚೆ ಸೇವಕರ ನೇಮಕ, ಕೂಡಲೇ ಅರ್ಜಿ‌ ಸಲ್ಲಿಸಿ

error: Content is protected !!