Police raid | ರಾತ್ರೋರಾತ್ರಿ ರೆಸಾರ್ಟ್ ಮೇಲೆ ಪೊಲೀಸರ ದಾಳಿ, ಡಬಲ್ ಬ್ಯಾರಲ್ ಬಂದೂಕು ಸೇರಿ ಅಮೂಲ್ಯ ಸಾಮಗ್ರಿ ಪತ್ತೆ

Police Raid

 

 

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ತೀರ್ಥಹಳ್ಳಿಯ ವಿಹಂಗಮ ಎಂಬ ರೆಸಾರ್ಟ್ ಮೇಲೆ ದಾಳಿ ನಡೆಸಿದ್ದು, ಭಾರೀ ಮೌಲ್ಯದ ಸಾಮಗ್ರಿಗಳು ಪತ್ತೆಯಾಗಿವೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಎಸ್.ಪಿ ಮಿಥುನ್ ಕುಮಾರ್, ಹೆಚ್ಚುವರಿ ಎಸ್.ಪಿ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ‌ ಗಜಾನನ ವಾಮನ ಸುತಾರ, ತೀರ್ಥಹಳ್ಳಿ ಪೊಲೀಸ್ ಠಾಣೆ ಪೋಲಿಸ್ ನಿರೀಕ್ಷಕ ಅಶ್ವತ್ ಗೌಡ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ಸಾಗರ್ ಅತ್ತರವಾಲ, ನವೀನ್ ಕುಮಾರ್ ಮಠಪತಿ, ರಂಗನಾಥ ಅಂತರಗಟ್ಟಿ, ಪ್ರವೀಣ್ ಸೇರಿ 50 ಜನ ಪೊಲೀಸ್ ಸಿಬ್ಬಂದಿಯನ್ನೊಳಗೊಂಡ ತಂಡವು ಶನಿವಾರ ರಾತ್ರಿ ದಾಳಿ ನಡೆಸಿದೆ‌.

READ | ವಿಐಎಸ್‌ಎಲ್ ಕಾರ್ಖಾನೆಯ ಬಾರ್ ಮಿಲ್ ಘಟಕ ಪುನರಾರಂಭ ಮುಂದೂಡಿಕೆ, ಕಾರಣವೇನು?

ದಾಳಿ ವೇಳೆ‌ ಸಿಕ್ಕಿದ್ದೇನು?
ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಂದಾಜು ₹1 ಲಕ್ಷ ಮೌಲ್ಯದ ಒಂದು ಡಬಲ್ ಬ್ಯಾರಲ್ ಬಂದೂಕು, ಅಂದಾಜು ₹25,000 ಮೌಲ್ಯದ 310 ಜೀವಂತ ಗುಂಡುಗಳು, ಒಂದು ಕತ್ತಿ ಮತ್ತು ಒಂದು ಚಾಕು, ಮೂರು ಕಾಡು ಕೋಣದ ಕೊಂಬಿನ ಟ್ರೋಫಿ, ಆರು ಜಿಂಕೆ ಕೊಂಬಿನ ಟ್ರೊಫಿ, ಒಂದು ಸಿಸಿ ಟಿವಿ ಡಿವಿಆರ್, ಅಂದಾಜು ₹7,650 ಮೌಲ್ಯದ ಒಟ್ಟು 51 ಬಿಯರ್ ಟಿನ್ ಗಳು, ಅಂದಾಜು ₹1 ಲಕ್ಷ ಮೌಲ್ಯದ ಮದ್ಯ ತುಂಬಿದ ಬಾಟಲ್ ಗಳು, ಅಂದಾಜು ₹750 ಮೌಲ್ಯದ ಒಟ್ಟು 6 Breezer ಬಾಟಲ್ ಮತ್ತು 3 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

Threat | ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಗೆ ಚಾಕುವಿನಿಂದ ಬೆದರಿಸಿದ ವ್ಯಕ್ತಿ ಅಂದರ್, ಪರಸ್ಪರ ಆರೋಪಗಳೇನು?

error: Content is protected !!