One click many news | ಪೆಟ್ರೋಲ್ ಥೆಫ್ಟ್ ಗ್ಯಾಂಗ್ ಅರೆಸ್ಟ್, ಪಬ್ಲಿಕ್ ಪ್ಲೇಸ್’ನಲ್ಲೇ ಗಾಂಜಾ ಮಾರಾಟ, ಅಪರಾಧಿಗೆ ಶಿಕ್ಷೆ

one click many news 1

 

 

ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ಭದ್ರಾವತಿಯ ಟಿ.ಕೆ ರಸ್ತೆ ಫ್ಲೈ ಓವರ್ ಕೆಳಭಾಗದಲ್ಲಿ ಯಾರೋ ಮೂವರು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಭದ್ರಾವತಿಯ ಮುಬಾರಕ್ ಅಲಿಯಾಸ್ ಡಿಚ್ಚಿ(27), ಬಾಬು (20), ಪರ್ವಿಜ್(25) ಎಂಬುವರನ್ನು ಬಂಧಿಸಲಾಗಿದೆ.‌ ಆರೋಪಿತರಿಂದ ಅಂದಾಜು ₹50 ಸಾವಿರ ಮೌಲ್ಯ ಒಟ್ಟು 1 ಕೆಜಿ 408 ಗ್ರಾಂ ತೂಕದ ಒಣ ಗಾಂಜಾ ಮತ್ತು ₹300 ನಗದು ವಶಪಡಿಸಿಕೊಳ್ಳಲಾಗಿದೆ.

READ | ಸಕ್ರೆಬೈಲಿನಲ್ಲಿ ಆನೆಗಳಿಗೆ ಅಲಂಕಾರ, ಕಬ್ಬು, ಹಣ್ಣು, ತರಕಾರಿ ಸೇವಿಸಿದ ಗಜರಾಜ, ಏನಿತ್ತು ವಿಶೇಷ?

ದಾಳಿ ನಡೆಸಿದ ತಂಡ
ಖಚಿತ ಮಾಹಿತಿಯ ಮೇರೆಗೆ ಭದ್ರಾವತಿ ಉಪ ವಿಭಾಗದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಮಾರ್ಗದರ್ಶನದಲ್ಲಿ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆ ಪಿಎಸ್ಐ ಚಂದ್ರಶೇಖರ್ ನಾಯ್ಕ್ ನೇತೃತ್ವದಲ್ಲಿ ಸಿಬ್ಬಂದಿ‌ ಕಾರ್ಯಾಚರಣೆ ನಡೆಸಿದ್ದಾರೆ. ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5 ವರ್ಷ ಕಠಿಷ ಶಿಕ್ಷೆ

SHIMOGA: ಪೊಲೀಸರಿಂದ ತಲೆಮರೆಸಿಕೊಂಡಿದ್ದ ಟಿಪ್ಪುನಗರ ನಿವಾಸಿ ಆಸಿಫ್ ಅಲಿಯಾಸ್ ಸನಾಟ ಆಸಿಫ್ (28) ಎಂಬಾತನಿಗೆ 5 ವರ್ಷ ಕಠಿಣ ಕಾರವಾಸ ಶಿಕ್ಷೆ ಮತ್ತು ₹15 ಸಾವಿರ ದಂಡ, ದಂಡ ಕಟ್ಟಲು ವಿಫಲನಾಲ್ಲಿ 6 ತಿಂಗಳು ಹೆಚ್ಚುವರಿ ಸಾದಾ ಕಾರವಾಸ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಮಂಜುನಾಥ ನಾಯಕ್ ಆದೇಶ ನೀಡಿದ್ದಾರೆ.

READ | ವಿಐಎಸ್‌ಎಲ್ ಕಾರ್ಖಾನೆಯ ಬಾರ್ ಮಿಲ್ ಘಟಕ ಪುನರಾರಂಭ ಮುಂದೂಡಿಕೆ, ಕಾರಣವೇನು?

ಸನಾಟ ಆಸಿಫ್ ಎಂಬಾತನನ್ನು ತುಂಗಾನಗರ ಪೊಲೀಸರು ಪ್ರಕರಣವೊಂದರ ಸಂಬಂಧ ಬೆಂಗಳೂರಿನಲ್ಲಿ ವಶಕ್ಕೆ ಪಡೆದು ಶಿವಮೊಗ್ಗಕ್ಕೆ ಕರೆತರುವಾಗ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಾಳಿ ರಸ್ತೆ ಹೊಳಲೂರು ಗ್ರಾಮದ ಹೊಟ್ಟೆಗುಡ್ಡದ ಬಳಿ ಮೂತ್ರ ವಿಸರ್ಜನೆಗೆಂದು ವಾಹನದಿಂದ ಇಳಿದಿದ್ದ. ಸ್ಥಳದಲ್ಲಿ ಬಿದ್ದಿದ್ದ ಕಬ್ಬಿಣದ ರಾಡಿನಿಂದ ಪಿಎಸ್ಐ ಮತ್ತು ಸಿಬ್ಬಂದಿಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಎಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ ತೀರ್ಪು ನೀಡಿದೆ. ಸರ್ಕಾರಿ ಅಭಿಯೋಜಕ ಸುರೇಶ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ಪೆಟ್ರೋಲ್ ಕದಿಯುತ್ತಿದ್ದವರು ಅರೆಸ್ಟ್

BHADRAVATHI: ಶಿವನಿ ಕ್ರಾಸ್ ನಲ್ಲಿರುವ ಪೆಟ್ರೋಲ್ ಬಂಕ್ ಪಕ್ಕದ ಖಾಲಿ ಜಾಗದಲ್ಲಿ ಭದ್ರಾವತಿ ನಗರದ ಮಾವಿನ ಕೆರೆ ವಾಸಿಯಾದ ಮಹೇಶ್ ಅವರು ತಮ್ಮ ಲಾರಿಯನ್ನು ನಿಲ್ಲಿಸಿದ್ದು, ಆ ಲಾರಿಯಲ್ಲಿದ್ದ ಡೀಸೆಲ್ ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಅವರು ನೀಡಿದ ದೂರಿನ ಮೇರೆಗೆ ಭದ್ರಾವತಿ ಹಳೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಶಿವಮೊಗ್ಗದ ಟಿಪ್ಪು ನಗರ ನಿವಾಸಿ ಸೋನು(24), ನೂರುಲ್ಲಾ(24) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿರಿಂದ ಅಂದಾಜು ₹15 ಸಾವಿರ ಮೌಲ್ಯದ 150 ಲೀಟರ್ ಡೀಸೆಲ್ ತುಂಬಿದ ಕ್ಯಾನುಗಳು ಮತ್ತು ಕೃತ್ಯಕ್ಕೆ ಉಪಯೋಗಿಸಲಾದ ಅಂದಾಜು ₹7 ಲಕ್ಷ ಮೌಲ್ಯದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

T-55 tank | ಸ್ವಾತಂತ್ರ್ಯೋತ್ಸವ ಮುನ್ನವೇ ಶಿವಮೊಗ್ಗಕ್ಕೆ ಆಗಮಿಸಿದ ಯುದ್ಧ ಟ್ಯಾಂಕರ್, ಏನಿದರ ವಿಶೇಷ? ಯುದ್ಧ ವಿಮಾನವೂ ಬರಲಿದೆ

error: Content is protected !!