Ganja | ಮನೆ ಹಿತ್ತಲಿನಲ್ಲಿ ಗಾಂಜಾ ಬೆಳೆ! ಮುಂದೇನಾಯ್ತು?

Ganja

 

 

ಸುದ್ದಿ ಕಣಜ.ಕಾಂ ಸೊರಬ
SORAB: ಮನೆಯ ಹಿಂಭಾಗದ ಹಿತ್ತಲಿನಲ್ಲಿ ಗಾಂಜಾ ಗಿಡವನ್ನು ಬೆಳೆದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ತಾಲೂಕಿನ ಕಡಸೂರು ಗ್ರಾಮದ ರಾಮಚಂದ್ರಪ್ಪ(50) ಎಂಬಾತನ ವಿರುದ್ಧ ಸೊರಬ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

READ | ಸಕ್ರೆಬೈಲಿನಲ್ಲಿ ಆನೆಗಳಿಗೆ ಅಲಂಕಾರ, ಕಬ್ಬು, ಹಣ್ಣು, ತರಕಾರಿ ಸೇವಿಸಿದ ಗಜರಾಜ, ಏನಿತ್ತು ವಿಶೇಷ?

ಅಡಿಕೆ ನಡುವೆ ಗಾಂಜಾ ಗಿಡ
ಖಚಿತ ಮಾಹಿತಿಯ ಮೇರೆಗೆ ಸೊರಬ ಪೊಲೀಸ್ ಠಾಣೆ ಪಿಎಸ್ಐ ಮಾಳಪ್ಪ ಮತ್ತು ಸಿಬ್ಬಂದಿಯ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದ್ದು, ಮನೆಯ ಹಿತ್ತಲಿನಲ್ಲಿ ಅಡಿಕೆ ಗಿಡಗಳ ಮದ್ಯೆ ಸಿಮೆಂಟ್ ಚೀಲದಲ್ಲಿ ಮಣ್ಣು ತುಂಬಿ ಬೆಳೆದಿದ್ದ ಅಂದಾಜು ₹3,000 ಮೌಲ್ಯದ 525 ಗ್ರಾಂ ಹಸಿ ಗಾಂಜಾ ಗಿಡವನ್ನು ವಶಪಡಿಸಿಕೊಳ್ಳಲಾಗಿದೆ.

Shimoga Rain | ಸೊರಬದಲ್ಲಿ ಶೂನ್ಯ ಮಳೆ, ಮಲೆನಾಡಿನಲ್ಲಿ ಭಾರಿ ಮಳೆ ಕೊರತೆ, ಜಲಾಶಯಗಳಲ್ಲಿ ನೀರಿ‌ನ ಮಟ್ಟವೆಷ್ಟು?

error: Content is protected !!