Central Warehousing Corporation | ಕೇಂದ್ರೀಯ ಉಗ್ರಾಣ ನಿಗಮದಲ್ಲಿ ಉದ್ಯೋಗಾವಕಾಶ, ಯಾರೆಲ್ಲ ಅರ್ಜಿ‌ ಸಲ್ಲಿಸಬಹುದು?

CWC

 

 

ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಕೇಂದ್ರೀಯ ಉಗ್ರಾಣ ನಿಗಮ (Central Warehousing Corporation)ದಲ್ಲಿ ಉದ್ಯೋಗಾವಕಾಶವಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದು‌. ಖಾಲಿ ಇರುವ ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್, ಅಸಿಸ್ಟಂಟ್ ಇಂಜಿನಿಯರ್, ಸೂಪರಿಂಟೆಂಡಂಟ್‌ ಹಾಗೂ ಇತರೆ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಹೊರಡಿಸಲಾಗಿದೆ.

READ | ಭಾರತೀಯ ಲೆಕ್ಕಪತ್ರ ಇಲಾಖೆಯಲ್ಲಿ 1773 ಹುದ್ದೆಗಳ ನೇಮಕ, ಅಧಿಸೂಚನೆಯಲ್ಲಿ ಏನಿದೆ?

  • ನೇಮಕಾತಿ ಸಂಸ್ಥೆ- ಕೇಂದ್ರೀಯ ಉಗ್ರಾಣ ನಿಗಮ (Central Warehousing Corporation)
  • ಒಟ್ಟು ಹುದ್ದೆಗಳು- 153
  • ಅಧಿಕೃತ ವೆಬ್ ಸೈಟ್- Click  
  • ಅಧಿಸೂಚನೆ ಪ್ರತಿ- Click 
  • ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ- 26/08/2023
  • ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ- 24/09/2023
  • ಆಯ್ಕೆ ವಿಧಾನ : ಲಿಖಿತ ಪರೀಕ್ಷೆ/ ಸಂದರ್ಶನ

ಹುದ್ದೆಗಳ ವಿವರ
ಅಸಿಸ್ಟಂಟ್ ಇಂಜಿನಿಯರ್ (ಸಿವಿಲ್)- 18, ಅಸಿಸ್ಟಂಟ್ ಇಂಜಿನಿಯರ್ (ಇಲೆಕ್ಟ್ರಿಕಲ್)- 5, ಅಕೌಂಟಂಟ್- 24, ಸೂಪರಿಂಟೆಂಡಂಟ್ (ಜೆನೆರಲ್)- 11, ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್- 81, ಸೂಪರಿಂಟೆಂಡಂಟ್ (ಜೆನೆರಲ್)- ಎಸ್‌ಆರ್‌ಡಿ (ಎನ್‌ಇ)- 2, ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್ ಎಸ್‌ಆರ್‌ಡಿ (ಎನ್‌ಇ)- 10, ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್ – ಎಸ್‌ಆರ್‌ಡಿ (ಯುಟಿ ಆಫ್‌ ಲಡಾಖ್)- 2.

READ | ಗೃಹರಕ್ಷಕ ದಳದಲ್ಲಿ 122 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಯಾವ ತಾಲೂಕಿನಲ್ಲಿ ಎಷ್ಟು ಹುದ್ದೆಗಳು ಖಾಲಿ?

ಹೊಂದಿರಬೇಕಾದ ವಿದ್ಯಾರ್ಹತೆಯ ವಿವರ
ಬಿಇ ಸಿವಿಲ್/ ಬಿಇ ಇಲೆಕ್ಟ್ರಿಕಲ್/ ಬಿ.ಕಾಂ, ಬಿ.ಎ/ ಪಿಜಿ/ ಡಿಗ್ರಿ ಇನ್ ಅಗ್ರಿಕಲ್ಚರ್, ಜೂವಾಲಜಿ, ಕೆಮಿಸ್ಟ್ರಿ, ಬಯೋ ಕೆಮಿಸ್ಟ್ರಿ/ ಪಿಜಿ ವಿಷಯಗಳಲ್ಲಿ ಉತ್ತೀರ್ಣರಾಗಿರಬೇಕು. ಆಯಾ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.
ಸಾಮಾನ್ಯ, ಒಬಿಸಿ, ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ₹1250 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹400 ಅರ್ಜಿ ಶುಲ್ಕ ಇರಲಿದೆ. ಅರ್ಜಿಯ ಶುಲ್ಕ ಪಾವತಿಗೆ ಡೆಬಿಟ್ ಕಾರ್ಡ್ ಕೂಡ ಬಳಸಬಹುದು‌. ವಯೋಮಿತಿ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಅಧಿಸೂಚನೆಯಲ್ಲಿ ಓದಿಕೊಳ್ಳಬಹುದು‌.

Smart city award 2023 | ಶಿವಮೊಗ್ಗ ಸ್ಮಾರ್ಟ್ ಸಿಟಿಗೆ ಪ್ರಶಸ್ತಿ, ರಾಜ್ಯದ ಇನ್ನೂ 3 ನಗರಗಳಿಗೆ ಅವಾರ್ಡ್ ಪ್ರಕಟ

 

error: Content is protected !!