Smart Traffic | ಹೊಸ ತಂತ್ರಜ್ಞಾನದಿಂದ ಮೊದಲ ದಿನವೇ ಟ್ರಾಫಿಕ್ ನಿಯಮ ಉಲ್ಲಂಘನೆಯ ಭರ್ಜರಿ ಕೇಸ್, ದಾಖಲಾದ ಕೇಸ್ ಗಳೆಷ್ಟು?

Trafic signal

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕ್ಯಾಮೆರಾಗಳು ಕಳುಹಿಸಿದ ಫೊಟೋ ಮತ್ತು ವಿಡಿಯೋಗಳನ್ನು ಆಧರಿಸಿ ಮೊದಲ ದಿನವೇ ಒಟ್ಟು 655 ವಾಹನ ಸವಾರರ/ ಮಾಲೀಕರಿಗೆ SMS ಮೂಲಕ ನೋಟಿಸ್ ಗಳನ್ನು ಕಳುಹಿಸಲಾಗಿರುತ್ತದೆ.

READ | ವಾಹನ ಮಾಲೀಕರೇ ಗಮನಿಸಿ,‌ ಇಂದಿನಿಂದ ಮನೆ ಬಾಗಿಲಿಗೆ ನೋಟಿಸ್, ಮೊಬೈಲಿಗೆ SMS

ನಗರದಲ್ಲಿ ಸ್ಮಾರ್ಟ್ ಸಿಟಿ (shimoga smart city) ಯೋಜನೆ ಅಡಿಯಲ್ಲಿ ಅಳವಡಿಸಲಾಗಿರುವ RLVD, SVD, PTZ, ASVD & ANPR ಕ್ಯಾಮರಾಗಳು Command and Control Center ಗೆ ಕಳುಹಿಸಿದ, ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದ ವಾಹನಗಳ ಫೊಟೋ ಮತ್ತು ವಿಡಿಯೋಗಳನ್ನು ಆಧರಿಸಿ ವಾಹನ ಮಾಲೀಕರಿಗೆ/ಸವಾರರಿಗೆ SMS ಮೂಲಕ ನೋಟೀಸ್ ಗಳನ್ನು ಕಳುಹಿಸಲಾಗುವ ವ್ಯವಸ್ಥೆಯನ್ನು ಈ ದಿನ ಆ.28 ರಿಂದ ಅನುಷ್ಠಾನಕ್ಕೆ ತರಲಾಗಿರುತ್ತದೆ.
ಯಾವುದೆಷ್ಟು ಕೇಸ್?
613 Singnal Jump, 36 Over Speed, 04 Without Helmate, 1 Without Seat Belt ಮತ್ತು 1 Mobile Riding ಪ್ರಕರಣಗಳು ಸೇರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಒಟ್ಟು 655 ವಾಹನ ಸವಾರರ / ಮಾಲೀಕರಿಗೆ SMS ಮೂಲಕ ನೋಟಿಸ್ ಗಳನ್ನು ಕಳುಹಿಸಲಾಗಿರುತ್ತದೆ.

Smart city award 2023 | ಶಿವಮೊಗ್ಗ ಸ್ಮಾರ್ಟ್ ಸಿಟಿಗೆ ಪ್ರಶಸ್ತಿ, ರಾಜ್ಯದ ಇನ್ನೂ 3 ನಗರಗಳಿಗೆ ಅವಾರ್ಡ್ ಪ್ರಕಟ

error: Content is protected !!