Stray dog | ಶಾಲೆಯಿಂದ ಮನೆಗೆ ಬರುವಾಗ ಬಾಲಕಿ ಮೇಲೆ ಬೀದಿನಾಯಿ ಅಟ್ಯಾಕ್, ಮುಖದ ಮೇಲೆ ಗಂಭೀರ ಗಾಯ

Dog

 

 

ಸುದ್ದಿ ಕಣಜ.ಕಾಂ ಹೊಳೆಹೊನ್ನೂರು
HOLEHONNUR: ಸಮೀಪದ ಬಿ.ಬೀರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳೆಬೆಳಗಲು ಗ್ರಾಮ(Holebelagalu villege) ದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಬೀದಿನಾಯಿ ದಾಳಿ ಮಾಡಿದ್ದು, ಮುಖ ಭಾಗದಲ್ಲಿ ಕಚ್ಚಿದೆ. ಬಾಲಕಿಗೆ ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Crime logo

READ | ಶಿವಮೊಗ್ಗಕ್ಕೆ ಆಗಮಿಸಿದ್ದ ಫಸ್ಟ್ ಫ್ಲೈಟ್ ಪ್ರಯಾಣ ಹೇಗಿತ್ತು?

ಎರಡು ದಿನಗಳಲ್ಲಿ ನಾಲ್ಕೈದು ಜನರ ಮೇಲೆ ದಾಳಿ
ಬಿ.ಬೀರನಹಳ್ಳಿ ಗ್ರಾಮದಲ್ಲಿ ಬೇಬಿ (6) ಎಂಬ ಬಾಲಕಿಗೆ ನಾಯಿ ಕಡಿದಿದ್ದು ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಶಾಲೆಯಿಂದ ಮನೆಗೆ ಬರುವ ಸಂದರ್ಭದಲ್ಲಿ ನಾಯಿಯು ಮಗುವನ್ನು ಹಿಡಿದು ಒಳದಾಡಿದೆ. ಕಳೆದ ಎರಡು ದಿನಗಳಲ್ಲಿ ನಾಲ್ಕೈದು ಜನರ ಮೇಲೆ ನಾಯಿಯು ದಾಳಿ‌ನಡೆಸಿದೆ. ಈ‌ ನಾಯಿಗೆ ಹುಚ್ಚು ಹಿಡಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹಲವರ ಮೇಲೆ ನಾಯಿ ದಾಳಿ
ಇಬ್ಬರು ಮಕ್ಕಳು, ಮೂವರು ಗ್ರಾಮಸ್ಥರು ಹಾಗೂ ರಸ್ತೆ ಬದಿ‌ಕಟ್ಡಿ ಹಾಕಿದ್ದ ಹಸುವಿಗೂ ನಾಯಿ ಕಚ್ಚಿದೆ.

error: Content is protected !!