Areca tree ruin | ನೆಟ್ಟಿದ್ದ 300 ಅಡಿಕೆ ಸಸಿಗಳ ನಾಶ, ಕಾರಣವೇನು?

Green arecanut

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಹೊಳೆಹೊನ್ನೂರು (Holehonnur) ಸಮೀಪದ ಆನವೇರಿ (Anaveri) ಗ್ರಾಮದಲ್ಲಿ ರೈತರೊಬ್ಬರ ಜಮೀನಿನಲ್ಲಿ ನಾಟಿ ಮಾಡಲಾಗಿದ್ದ 300 ಅಡಿಕೆ ಗಿಡ(areca tree)ಗಳನ್ನು ಕಿತ್ತು ನಾಶ ಮಾಡಿರುವ ಘಟನೆ ನಡೆದಿದ್ದು, ಪ್ರಕರಣವು ಪೊಲೀಸ್ ಠಾಣೆ ಮೆಟ್ಟಿಲೇರಿದೆ.

Crime logo

READ | 02/09/2023ರ ಅಡಿಕೆ ಧಾರಣೆ ಎಷ್ಟಿದೆ?

ರೈತ ಲೋಕೇಶಪ್ಪ ಅವರು ಅರ್ಧ ಎಕರೆ ಜಮೀನಿನಲ್ಲಿ ಒಂದು ತಿಂಗಳ ಹಿಂದಷ್ಟೇ 300 ಅಡಿಕೆ ಸಸಿಗಳನ್ನು ನಾಟಿ ಮಾಡಿದ್ದರು. ಇದೇ ವಿಚಾರವಾಗಿ ಗ್ರಾಮದ ರಫೀಕ್ ಮತ್ತು ಸಹೋದರ ಫಯಾಜ್ ಅವರು ಲೋಕೇಶಪ್ಪ ಅವರೊಂದಿಗೆ ಕ್ಯಾತೆ ತೆಗೆದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜಮೀನು ವಿಚಾರದಲ್ಲಿ ವಿವಾದ ಗಿಡಗಳ ನಾಶ
ಜಮೀನು ವಿವಾದದ ವಿಚಾರದಲ್ಲಿ ಗ್ರಾಮದ ಮುಖಂಡರೊಬ್ಬರು ಇಬ್ಬರ ನಡುವೆ ರಾಜೀ ಸಂಧಾನವನ್ನು ಮಾಡಿದ್ದರು ಎಂದು ತಿಳಿದುಬಂದಿದೆ. ರಾಜೀ ನಂತರ ಲೋಕೇಶಪ್ಪ ಅವರು ತಮ್ಮ ಜಮೀನಿನ ಭೂಮಿಯನ್ನು ಸಮತಟ್ಟು ಮಾಡಿಕೊಂಡು ಅಡಕೆ ಸಸಿಗಳನ್ನು ನೆಟ್ಟಿದ್ದರು ಎನ್ನಲಾಗಿದೆ.
ಆದರೆ, ಏಕಾಏಕಿ ಜಮೀನು ವಿವಾದ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ತೋಟಕ್ಕೆ ನುಗ್ಗಿ 300 ಗಿಡಗಳನ್ನು ಕಿತ್ತು ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹೊಳೆಹೊನ್ನೂರು ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Smart Traffic | ಹೊಸ ತಂತ್ರಜ್ಞಾನದಿಂದ ಮೊದಲ ದಿನವೇ ಟ್ರಾಫಿಕ್ ನಿಯಮ ಉಲ್ಲಂಘನೆಯ ಭರ್ಜರಿ ಕೇಸ್, ದಾಖಲಾದ ಕೇಸ್ ಗಳೆಷ್ಟು?

error: Content is protected !!