ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಗನಿಗೆ ಓಮ್ನಿ ಓಡಿಸಲು ಕೊಟ್ಟಿದ್ದ ತಂದೆಗೆ ₹25 ಸಾವಿರ ದಂಡ ವಿಧಿಸಿ 3ನೇ ಎ.ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಆದೇಶಿಸಿದರು.
READ | ಗಣೇಶ ಚತುರ್ಥಿ ಹಿನ್ನೆಲೆ ವಿಶೇಷ ರೈಲುಗಳು ಆರಂಭ, ಏನಿದೆ ವೇಳಾಪಟ್ಟಿ?
ಬಾಲಕನ ತಂದೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ನಿವಾಸಿ ಏಲಿಯಾಸ್(41)ಗೆ ದಂಡ ವಿಧಿಸಲಾಗಿದೆ. ಶಿವಮೊಗ್ಗ ನಗರದ ಕರ್ನಾಟಕ ಸಂಘದ ಹತ್ತಿರ ವಾಹನ ತಪಾಸಣೆ ಮಾಡುವಾಗ 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬನು ವಾಹನ ಚಾಲನಾ ಪರವಾನಗಿ ಇಲ್ಲದೆ ಓಮ್ನಿ ವಾಹನವನ್ನು ಚಾಲನೆ ಮಾಡಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದು, ಬಾಲಕನಿಗೆ ವಾಹನವನ್ನು ಚಾಲನೆ ಮಾಡಲು ಅವಕಾಶ ನೀಡಿದ ವಾಹನದ ಮಾಲೀಕನಿಗೆ ದಂಡ ವಿಧಿಸಲಾಗಿದೆ.
34 ಲಘು ಪ್ರಕರಣ ದಾಖಲು
SHIMOGA: ಸೋಮವಾರ ಸಂಜೆ ಶಿವಮೊಗ್ಗ-ಎ ಉಪ ವಿಭಾಗ ವ್ಯಾಪ್ತಿಯ ಲಷ್ಕರ್ ಮೊಹಲ್ಲಾ, ಬಿ.ಎಚ್ ರಸ್ತೆ, ಕಾನ್ವೆಂಟ್ ಸರ್ಕಲ್, ಡಿವಿಎಸ್ ಸರ್ಕಲ್, ಅಣ್ಣಾನಗರ, ಮಂಜುನಾಥ್ ಬಡಾವಣೆ, ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಬೊಮ್ಮನಕಟ್ಟೆ, ಭದ್ರಾ ಕಾಲೋನಿ, ಹುತ್ತಾ ಕಾಲೋನಿ, ಹೊಳೆಹೊನ್ನೂರಿನ ಹಕ್ಕಿ ಪಿಕ್ಕಿ ಕ್ಯಾಂಪ್, ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ ರಿಪ್ಪನ್ ಪೇಟೆಯ ಕೆಂಚನಾಳ ಸಾಗರ ಉಪ ವಿಭಾಗ ವ್ಯಾಪ್ತಿಯ ಸಾಗರ ಟೌನ್ ನೆಹರು ನಗರ, ಹೆಗ್ಗೋಡು ಯಲಗಳಲೆ, ಶೆಡ್ತಿಕೆರೆ, ಕಾರ್ಗಲ್ ನ ಮಸೀದಿ ಸರ್ಕಲ್ ಮತ್ತು ಆನಂದಪುರದ ದಾಸಕೊಪ್ಪ ಸರ್ಕಲ್ ನ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ ಆಯಾ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿ ತಂಡವು Area Domination ವಿಶೇಷ ಗಸ್ತು ಮಾಡಿ Public Nuisance ಮಾಡುವ ಮತ್ತು ಅನುಮಾನಸ್ಪಾದ ವ್ಯಕ್ತಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿದೆ.
ಸಾರ್ವಜನಿಕರಿಗೆ ಕಿರುಕುಳ ನೀಡಿದ ವ್ಯಕ್ತಿಗಳ ವಿರುದ್ದ ಒಟ್ಟು 34 ಲಘು ಪ್ರಕರಣಗಳನ್ನು ಮತ್ತು IMV ಕಾಯ್ದೆ ಅಡಿಯಲ್ಲಿ 5 ಪ್ರಕರಣಗಳನ್ನು ದಾಖಲಿಸಿರುತ್ತದೆ.