Shimoga airport | ಕೂಲಿಕಾರ್ಮಿಕನ ವಿಮಾನ ಪ್ರಯಾಣದ ಕನಸು ನನಸು ಮಾಡಿದ ಶಿವಮೊಗ್ಗ ಏರ್‍ಪೋರ್ಟ್, ಮೊದಲ ಪ್ರಯಾಣದ ಬಗ್ಗೆ ಹೇಳಿದ್ದೇನು?

Airport smg

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಇಂಡಿಗೋ ವಿಮಾನಯಾನದ ಮೂಲಕ ನ್ಯಾಮತಿಯ ಕೂಲಿಕಾರ್ಮಿಕ ಹಾಗೂ ರೈತ ರಾಜಪ್ಪ ಎಂಬುವವರು ಪ್ರಯಾಣಿಸಿದ್ದಾರೆ. ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಖುದ್ದು ಸಂಸದ ಬಿ.ವೈ.ರಾಘವೇಂದ್ರ ಅವರೇ ಇದನ್ನು ಹಂಚಿಕೊಂಡಿದ್ದಾರೆ.

VIDEO REPORT

READ | ಲಿಫ್ಟ್ ನೀಡುವುದಾಗಿ ಕರೆದೊಯ್ದು ದರೋಡೆ, 24 ಗಂಟೆಯಲ್ಲೇ ಆರೋಪಿಗಳು ಅಂದರ್

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದ ಬಿ.ವೈ.ರಾಘವೇಂದ್ರ ಅವರು ವಿಮಾನ ನಿಲ್ದಾಣ ಕಾಮಗಾರಿ ಆರಂಭವಾದಾಗಿನಿಂದ ಈ ನಿಲ್ದಾಣವು ಮಲೆನಾಡಿನ ಪಾಲಿಗೆ ಅನುಕೂಲ ಮಾಡಿಕೊಡಲಿದೆ ಎಂದು ಪುನರುಚ್ಛಿಸುತ್ತಲೇ ಬಂದಿದ್ದರು. ಉದ್ಘಾಟನೆಯ ದಿನವೂ ಎಲ್ಲ ವರ್ಗದವರಿಗೂ ವಿಮಾನದ ಪ್ರಯೋಜನದ ಬಗ್ಗೆ ಹೇಳಿದ್ದರು. ಅದು ಮಂಗಳವಾರ ಕಾರ್ಯಾನುಷ್ಠಾನಗೊಂಡಂತಾಗಿದೆ.

ವಿಮಾನದಲ್ಲಿ ಪ್ರಯಾಣಿಸಬೇಕೆಂಬ ಆಸೆಯಿತ್ತು. ಅದು ಈಗ ನನಸಾಗಿದೆ. ಬೆಂಗಳೂರಿನಲ್ಲಿ ಏನೂ ಕೆಲಸವಿಲ್ಲ. ಒಮ್ಮೆ ವಿಮಾನ ಹತ್ತಬೇಕೆಂದುಕೊಂಡಿದ್ದೆ. ಮೋದಿ ಅವರು ಉದ್ಘಾಟನೆಗೆ ಬಂದಾಗಲೇ ವಿಮಾನ ಸೇವೆ ಲಭ್ಯ ಇದೆ ಎಂದು ಭಾವಿಸಿದ್ದೆ. ಆದರೆ, ಆಗ ವಿಮಾನ ಹಾರಾಟ ಆರಂಭವಾಗಿರಲಿಲ್ಲ. ಹೀಗಾಗಿ, ಈಗ ಹೋಗುತ್ತಿದ್ದೇನೆ.
ರಾಜಪ್ಪ, ಕೂಲಿಕಾರ್ಮಿಕ, ರೈತರು, ನ್ಯಾಮತಿ

ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆಗಿದ್ದು, ಹೆಮ್ಮೆಯ ವಿಚಾರವಾಗಿದೆ. ತುರ್ತು ಕೆಲಸಗಳಿದ್ದರೆ ವಿಮಾನ ಪ್ರಯಾಣಕ್ಕೆ ಅನುಕೂಲವಾಗಲಿದೆ. 2,920 ರೂ. ಪಾವತಿಸಿ ಪ್ರಯಾಣಿಸಿದ್ದೇನೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ನಮ್ಮೂರಿನಿಂದ ಮೊದಲು ಪ್ರಯಾಣಿಸಿದ್ದೇನೆಂಬ ಹೆಮ್ಮೆಯೂ ಇದೆ. ಅತ್ಯಂತ ಸುಸಜ್ಜಿತವಾದ ವಿಮಾನ ನಿಲ್ದಾಣ ಮಾಡಲಾಗಿದೆ. ಖಂಡಿತ ಭವಿಷ್ಯದಲ್ಲಿ ಇದರ ಪ್ರಯೋಜನ ಎಲ್ಲರಿಗೂ ಆಗಲಿದೆ.

Gruha Jyothi scheme | ಗೃಹ ಜ್ಯೋತಿ ಯೋಜನೆಗೆ ನೋಂದಣಿ ಹೇಗೆ, ಯಾರಿಗೆ ಯೋಜನೆ ಲಾಭ? ಏನೆಲ್ಲ ಷರತ್ತುಗಳಿವೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

error: Content is protected !!