Judgement | ಬೀಡಾ ಅಂಗಡಿಯಲ್ಲಿ ನುಗ್ಗಿ ಚಿನ್ನಾಭರಣ ಕದ್ದವರಿಗೆ 2 ವರ್ಷ ಜೈಲು

NEWS UPDATES

 

 

ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ತಾಲೂಕಿನ ಶಂಕರಘಟ್ಟದ ಬೀಡಾ ಅಂಗಡಿಯೊಂದರಲ್ಲಿ ಮಹಿಳೆಯ ಚಿನ್ನದ ಸರ ದೋಚಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳಿಗೆ 2 ವರ್ಷ ಜೈಲು ಶಿಕ್ಷೆ, 5 ಸಾವಿರ ರೂ. ದಂಡ ವಿಧಿಸಿ ಎಎಸ್.ಸಿಜೆ ಮತ್ತು ಜೆಎಂಎಫ್.ಸಿ ಹಿರಿಯ ನ್ಯಾಯಾಧೀಶ ವಿ.ಎನ್.ಮಿಲನ ಆದೇಶಿಸಿದ್ದಾರೆ.

READ | ಕೋವಿಡ್ ವೇಳೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗಳಿಗೆ ಶಿಕ್ಷೆ

ಬೀಡಾ ಹಾಕುವಂತೆ ಹೇಳಿ ಸರ ದೋಚಿದ್ದರು
2019ರಲ್ಲಿ ಬೀಡಾ ಅಂಗಡಿಯಲ್ಲಿ ಪಾಪಮ್ಮ ಎಂಬುವವರ ಚಿನ್ನದ ಸರವನ್ನು ದೋಚಲಾಗಿತ್ತು. ಬೈಕಿನಲ್ಲಿ ಬಂದ ಇಬ್ಬರು ಬೀಡಾ ಹಾಕುವಂತೆ ಹೇಳಿ ಏಕಾಏಕಿ ಕಿತ್ತಿನಲ್ಲಿದ್ದ ಸರವನ್ನು ದೋಚಿ ಎಲ್ಲಿಂದ ಪರಾರಿಯಾಗಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ನ್ಯಾಯಾಧೀಶರು ಪ್ರಕರಣದ ವಿಚಾರ ನಡೆಸಿ ಭದ್ರಾವತಿಯ ಜನ್ನಾಪುರದ ವೇಲೂರು ಶೆಡ್ ನಿವಾಸಿ ಇಮ್ರಾನ್(22), ಶಿವರಾಮ ನಗರದ ದರ್ಶನ್(21) ಶಿಕ್ಷೆ ವಿಧಿಸಲಾಗಿದೆ. ಎಪಿಪಿ ತಿಪ್ಪೇಶರಾವ್ ವಾದ ಮಂಡಿಸಿದ್ದರು.

error: Content is protected !!