Shimoga Rain | ಶಿವಮೊಗ್ಗದಲ್ಲಿ ಏಕಾಏಕಿ ಗುಡುಗು ಸಹಿತ‌ ಮಳೆ

Heavy rain brings 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದಲ್ಲಿ ಬುಧವಾರ ರಾತ್ರಿ ಏಕಾಏಕಿ‌ ಸುರಿದ ಮಳೆ  ಇಳೆಗೆ ತಂಪೆರಚಿದೆ.
ನಗರದಾದ್ಯಂತ ವರ್ಷಧಾರೆ ಆಗುತ್ತಿದೆ. ಮಳೆಗಾಲ ಮುಗಿದರೂ ಅಷ್ಟೊಂದು ಧಾರಾಕಾರ ಮಳೆ ಸುರಿದಿರಲಿಲ್ಲ. ಇಂದು ರಾತ್ರಿ ಗುಡುಗು ಸಹಿತ ಮಳೆಯಾಗುತ್ತಿದ್ದು, ಧಗೆಯ ಪ್ರಮಾಣ ಅಲ್ಪ ಕುಸಿದಿದೆ.

READ | ತೀರ್ಥಹಳ್ಳಿ ಪ್ರಕರಣ, ಎರಡು ದಿನ ಚಿಕಿತ್ಸೆಯ ಬಳಿಕವೂ ಬದುಕುಳಿಯದ ಅರ್ಚಕರ ಕಿರಿಯ ಪುತ್ರ

ಕಳೆದ ಕೆಲವು ದಿನಗಳಿಂದ ವಿಪರೀತ ಬಿಸಿಲು ಮತ್ತು ಧಗೆ ಇದ್ದು, ಬುಧವಾರ ಬೆಳಗ್ಗೆ ಸಹ ಬಿಸಿಲಿತ್ತು, ಬೆವರಿಳಿಯುತ್ತಿತ್ತು. ಸಂಜೆಯ ಬಳಿಕ‌ ಮೋಡ ಕವಿದ ವಾತಾವರಣವಿದ್ದು, ರಾತ್ರಿ ಗುಡುಗು, ಮಿಂಚು ಅಬ್ಬರ ಜೋರಾಗಿದೆ. ಈಗ ಮಳೆ ಸುರಿಯುತ್ತಿದೆ. ಕೆಲವೇ ಹೊತ್ತಿನಿಂದ ಸುರಿದ ಮಳೆಯಿಂದ ರಸ್ತೆಯಲ್ಲಿ ನೀರು ನಿಂತಿದೆ.

error: Content is protected !!