Railway station | ಶಿವಮೊಗ್ಗ ರೈಲು‌‌ ನಿಲ್ದಾಣದಲ್ಲಿ ಪ್ರಯಾಣಿಕರ ಪರಿಶೀಲನೆ, ಕಾರಣವೇನು?

Railway station

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ರೈಲು‌‌‌ ನಿಲ್ದಾಣದಲ್ಲಿ(shimoga railway station- SMET) ಪ್ರಯಾಣಿಕರನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಜೊತೆಗೆ ಜಾಗೃತಿ ಸಹ ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ಇತ್ತೀಚಿನ ಅಗ್ನಿ ಅವಘಡಗಳನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಮಂಡಳಿ, ನವದೆಹಲಿ ಮತ್ತು ಆರ್‍.ಪಿಎಫ್ ಹೆಡ್ ಕ್ವಾರ್ಟರ್ಸ್’ನ ನಿರ್ದೇಶನದಂತೆ ದಹಿಸುವ ವಸ್ತುಗಳನ್ನು ಸಾಗಿಸುವುದರ ವಿರುದ್ಧ ವಿಶೇಷ ಡ್ರೈವ್ ಮಾಡಲಾಗುತ್ತಿದೆ. ಸಾಮಾನ್ಯ ಜಾಗೃತಿಯನ್ನು ಸಹ ಶಿವಮೊಗ್ಗ ರೈಲ್ವೆ ಸ್ಟೇಷನ್‍ನಲ್ಲಿ ಪೋಸ್ಟ್ ಕಮಾಂಡರ್, ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ವತಿಯಿಂದ ಆಯೋಜಿಸಲಾಗಿದೆ.

Shivamogga railway station
ಶಿವಮೊಗ್ಗ ರೈಲ್ವೆ ನಿಲ್ದಾಣದ ಹೊರನೋಟ.

READ | ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, ಶಿವಮೊಗ್ಗದ ಯಾರಿಗೆಲ್ಲ ಪ್ರಶಸ್ತಿ ಲಭಿಸಿದೆ? ಈ ಸಲ ಪ್ರಶಸ್ತಿಯ ಇನ್ನೊಂದು ವಿಶೇಷವೇನು?

ಸ್ಫೋಟಕ ವಸ್ತುಗಳು ಕೊಂಡೊಯ್ಯದಂತೆ ಎಚ್ಚರಿಕೆ
ಮುಂಬರುವ ದಿನಗಳಲ್ಲಿ ದಿಪಾವಳಿ ಹಬ್ಬವಿದ್ದು, ಮುಂಜಾಗ್ರತಾ ಕ್ರಮವಾಗಿ ಚೆಕಿಂಗ್ ಮಾಡಲಾಗುತ್ತಿದೆ ರೈಲುಗಳಲ್ಲಿ ಅಥವಾ ರೈಲ್ವೆ ಆವರಣದಲ್ಲಿ ಯಾವುದೇ ದಹನಕಾರಿ ವಸ್ತುಗಳು, ಪಟಾಕಿಗಳನ್ನು ಕೊಂಡೊಯ್ಯದಂತೆ ತಿಳಿವಳಿಕೆ ಮೂಡಿಸುವ ಮೂಲಕ ರೈಲು ನಿಲ್ದಾಣ ಮತ್ತು ರೈಲುಗಳಲ್ಲಿ ಪ್ರಯಾಣಿಕರಿಗೆ ಅರಿವು ಮೂಡಿಸಲಾಯಿತು.
ರೈಲುಗಳಲ್ಲಿ ಪಟಾಕಿ, ಸಿಲೆಂಡರ್ ಗ್ಯಾಸ್ ಇತರೆ ದಹನಕಾರಿ ವಸ್ತುಗಳನ್ನು ಸಾಗಿಸುವುದು ಕಂಡು ಬಂದರೆ ರೈಲ್ವೆ ಕಾಯ್ದೆ 164 ವಿಧಿಯ ಪ್ರಕಾರ 3 ವರ್ಷ ಜೈಲು ಶಿಕ್ಷೆ ಅಥವಾ ₹1000 ದವರೆಗೆ ದಂಡ ಅಥವಾ ಎರಡನ್ನೂ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಈ ವೇಳೆ ಆರ್‍.ಪಿಎಫ್ ಇನ್ಸ್‍ಪೆಕ್ಟರ್ ಬಿ.ಎನ್.ಕುಬೇರಪ್ಪ, ಸಬ್ ಇನ್ಸ್ ಪೆಕ್ಟರ್ ಸಂತೋಷ್ ಗಾಂವ್ಕರ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

error: Content is protected !!