Kuvempu university | ತಿಂಗಳುಗಳೇ‌ ಕಳೆದರೂ ನೇಮಕವಾಗದ ಅತಿಥಿ‌ ಉಪನ್ಯಾಸಕರು! ತರಗತಿಗಳಿಗೆ ಗ್ರಹಣ

NSUI

 

 

ಸುದ್ದಿ ಕಣಜ.ಕಾಂ‌ ಶಿವಮೊಗ್ಗ
SHIVAMOGGA: ಕುವೆಂಪು ವಿಶ್ವವಿದ್ಯಾಲಯ Kuvempu university) ವ್ಯಾಪ್ತಿಯ ತರಗತಿಗಳು ಪ್ರಾರಂಭವಾಗಿ ತಿಂಗಳುಗಳೇ ಕಳೆದಿವೆ. ಆದರೆ, ಇನ್ನೂ ಅತಿಥಿ ಉಪನ್ಯಾಸಕ(Guest lecture)ರನ್ನು ನೇಮಕ ಮಾಡಿಕೊಂಡಿಲ್ಲ.‌ ವಿವಿಯ‌‌ ಈ‌ ಕ್ರಮವನ್ನು ಜಿಲ್ಲಾ ಎನ್.ಎಸ್.ಯು.ಐ. (National Students’ Union of India- NSUI) ವಿರೋಧಿಸಿದೆ.

READ | ಕರ್ನಾಟಕ ಸಂಘದ ಪುಸ್ತಕ ಬಹುಮಾನ ಘೋಷಣೆ, ಯಾವೆಲ್ಲ ಪುಸ್ತಕಗಳು ಆಯ್ಕೆಯಾಗಿವೆ? ಇಲ್ಲಿದೆ‌ ಪಟ್ಟಿ

ಸಕಾಲಕ್ಕೆ ಅತಿಥಿ‌ ಉಪನ್ಯಾಸಕರನ್ನು ನೇಮಕ‌ ಮಾಡದೇ‌ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಕೂಡಲೇ ಈ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಕುವೆಂಪು ವಿವಿ ಕುಲಪತಿಗೆ ಮನವಿ ಸಲ್ಲಿಸಿದ ಎನ್.ಎಸ್.ಯು.ಐ ಪ್ರಮುಖರು, ವಿದ್ಯಾರ್ಥಿಗಳ ಆತಂಕವನ್ನು ನಿವಾರಿಸುವ ಕೆಲಸ ವಿವಿ ಮಾಡಬೇಕು. ನ್ಯಾಯಾಲಯವು ಪ್ರತಿ ವರ್ಷ ನೇಮಕಾತಿ ಅಧಿಸೂಚನೆ ಹೊರಡಿಸಿ, ನೇಮಕಾತಿ ಮಾಡಿಕೊಳ್ಳಬೇಕೆಂದು ನೀಡಿರುವ ಆದೇಶದಂತೆ ನಿಯಮಾನುಸಾರ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಆದಷ್ಡು ಬೇಗ ಮಾಡಬೇಕು. ಇಲ್ಲವಾದಲ್ಲಿ ಎನ್.ಎಸ್.ಯು.ಐ. ಹೋರಾಟ ತೀವ್ರಗೊಳಿಸುವುದು ಎಂದು ಎಚ್ಚರಿಸಲಾಗಿದೆ.
ಎನ್.ಎಸ್.ಯು.ಐ ಪ್ರಮುಖರಾದ ರವಿ ಕಾಟಿಕೆರೆ ಚರಣ, ಹರ್ಷಿತ್ ಗೌಡ, ವಿಜಯ ಕುಮಾರ್, ರವಿಕುಮಾರ್, ಚಂದ್ರೋಜಿರಾವ್, ಕೀರ್ತಿ ವಿಶಾಲ್ ಉಪಸ್ಥಿತರಿದ್ದರು.

ಡಿ.ಎಸ್.ಎಸ್.ನಿಂದ ಪ್ರತಿಭಟನೆ ಎಚ್ಚರಿಕೆ

Kuvempu University Administration buliding

SHIMOGA: 2022-23ನೇ ಶೈಕ್ಷಣಿಕ‌ ಸಾಲಿನ ವಿಶ್ವವಿದ್ಯಾಲಯದ ಪದವಿ ಕಾಲೇಜುಗಳ ಬಿ.ಎ., ಎಎಸ್ಸಿ, ಬಿಕಾಂ (ಸ್ನಾತಕ) ತರಗತಿಗಳು ಆ.23ಕ್ಕೆ ಮುಗಿದಿವೆ. 2023-24ನೇ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಸೆ.19ರಿಂದ ತರಗತಿಗಳೂ ಆರಂಭಗೊಂಡಿವೆ. ಆದರೆ, ಅತಿಥಿ ಉಪನ್ಯಾಸಕರ‌ ನೇಮಕಾತಿ ಆಗದ್ದಕ್ಕೆ ತರಗತಿಗಳಿಗೆ ಗ್ರಹಣ ಹಿಡಿದಿದೆ. ಕಾಯಂ ಅಧ್ಯಾಪಕರು ಮೌಲ್ಯಮಾಪನ‌ ಕಾರ್ಯಕ್ಕೆ ತೆರಳಿದ್ದು, ಅ.20ಕ್ಕೆ‌ ಬಂದಿದ್ದಾರೆ. ಈ ನಡುವೆ ಹಬ್ಬದ ರಜೆಗಳು ಇದ್ದುದ್ದರಿಂದ ತರಗತಿಗಳು ನಡೆದಿಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (Dalit Sangharsh Samiti- DSS) ಆರೋಪಿಸಿದೆ. ಶೀಘ್ರ ಅತಿಥಿ‌ ಉಪನ್ಯಾಸಕರ ನೇಮಕಾತಿ ಪೂರ್ಣಗೊಳಿಸಿ ತರಗತಿ ಆರಂಭಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಲಾಗಿದೆ.

error: Content is protected !!