DVS Food Competition | ಇಂಧನವಿಲ್ಲದೇ ಅಡುಗೆ ತಯಾರಿಸಿದ ವಿದ್ಯಾರ್ಥಿಗಳು, ಹೇಗಿತ್ತು ಸ್ಪರ್ಧೆ?

DVS

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ದೇಶಿಯ ವಿದ್ಯಾ ಶಾಲಾ ಸಮಿತಿಯ ಡಿವಿಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಇಂಧನ ರಹಿತ ಅಡುಗೆ ಸ್ಪರ್ಧೆ ಗಮನ ಸೆಳೆಯಿತು.
ತರಕಾರಿ, ಹಣ್ಣು, ಮಂಡಕ್ಕಿ, ಪಾನಿಪೂರಿ, ಸೊಪ್ಪು, ಬಿಸ್ಕಟ್ ಸೇರಿದಂತೆ ವೈವಿಧ್ಯ ಬಗೆಯ ಅಡುಗೆಗೆ ಬೇಕಾಗುವ ವಸ್ತುಗಳನ್ನು ವಿದ್ಯಾರ್ಥಿಗಳು ತಂದಿದ್ದರು. ಅತ್ಯಂತ ಉತ್ಸಾಹದಿಂದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

READ | ಕ್ರಿಕೆಟ್ ಆಸಕ್ತರಿಗೆ ಶುಭ ಸುದ್ದಿ, ಶಿವಮೊಗ್ಗದಲ್ಲಿ ಬೃಹತ್ ಎಲ್.ಇ.ಡಿ ಪರದೆ ಮೇಲೆ ವಿಶ್ವಕಪ್ ಫೈನಲ್ ಪಂದ್ಯಾವಳಿ ಪ್ರದರ್ಶನ, ಎಲ್ಲಿ, ಯಾವಾಗ?

ತರಹೇವಾರಿ ಅಡುಗೆ ಸಿದ್ಧಪಡಿಸಿದ ಮಕ್ಕಳು
ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಯಲ್ಲಿ ಆಸಕ್ತಿ ಹೆಚ್ಚಿಸುವ, ಕ್ರೀಯಾತ್ಮಕ ಆಲೋಚನೆ ಬೆಳೆಸುವ ದೃಷ್ಠಿಯಿಂದ ಇಂತಹ ಸ್ಪರ್ಧೆಗಳು ಅತ್ಯಂತ ಉಪಯುಕ್ತ ಆಗಿರುತ್ತವೆ. ವಿದ್ಯಾರ್ಥಿಗಳು ಹೊಸ ಹೊಸ ರೀತಿಯ ಚಾಟ್ಸ್, ತಿಂಡಿ ತಿನಿಸುಗಳನ್ನು ತಯಾರಿಸಿದ್ದರು. ಆಸಕ್ತಿ ವಹಿಸಿ ವಿದ್ಯಾರ್ಥಿಗಳ ತಂಡಗಳು ವಿಶೇಷ ವಿಭಿನ್ನವಾಗಿ ಅಡುಗೆ ಸಿದ್ಧಪಡಿಸಿದ್ದರು.
ಇಂಧನರಹಿತ ಅಡುಗೆ ಮಾಡುವುದು ಅತ್ಯಂತ ಸವಾಲಿನ ಕೆಲಸ. ಈ ಸ್ಪರ್ಧೆಯಲ್ಲಿ 250ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಗುಂಪುಗಳಾಗಿ ವಿಂಗಡಿಸಿ ಸ್ಪರ್ಧೆ ನಡೆಸಲಾಯಿತು. 8ನೇ ತರಗತಿ, 9ನೇ ತರಗತಿ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆ ನಡೆಯಿತು.
30 ನಿಮಿಷಕ್ಕೂ ಅಧಿಕ ಕಾಲಾವಕಾಶ
ವಿದ್ಯಾರ್ಥಿಗಳಿಗೆ 30 ನಿಮಿಷಕ್ಕೂ ಅಧಿಕ ಕಾಲ ತಿಂಡಿ ತಿನಿಸು ತಯಾರಿಕೆಗೆ ಅವಕಾಶ ನೀಡಲಾಗಿತ್ತು. ನಂತರ ತೀರ್ಪುಗಾರರು ವಿದ್ಯಾರ್ಥಿಗಳ ಗುಂಪುಗಳು ತಯಾರಿಸಿದ್ದ ಅಡುಗೆ ರುಚಿ ಸವಿದು 8ನೇ, 9ನೇ ಹಾಗೂ 10ನೇ ತರಗತಿಯ ಪ್ರತಿ ವಿಭಾಗದಲ್ಲೂ ಐದು ತಂಡಗಳಿಗೆ ಬಹುಮಾನ ನೀಡಿದರು.
ದೇಶಿಯ ವಿದ್ಯಾಶಾಲಾ ಸಮಿತಿ ಉಪಾಧ್ಯಕ್ಷ ಎಸ್.ಪಿ.ದಿನೇಶ್, ಕಾರ್ಯದರ್ಶಿ ಎಸ್.ರಾಜಶೇಖರ್, ಖಜಾಂಚಿ ಬಿ.ಗೋಪಿನಾಥ್, ಆಡಳಿತ ಮಂಡಳಿಯ ಹರೀಶ್.ಎಸ್., ಪ್ರೌಢಶಾಲಾ ವಿಭಾಗದ ಉಪಪ್ರಾಚಾರ್ಯ ಸಿ.ಕೆ.ಶ್ರೀಧರ್, ಶಿಕ್ಷಕರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

Book My HSRP | ಎಚ್.ಎಸ್.ಆರ್.ಪಿಗೆ ಅರ್ಜಿ ಸಲ್ಲಿಕೆ ಹೇಗೆ, ಏನಿದು ಅತಿ ಸುರಕ್ಷಿತ ನೋಂದಣಿ ಫಲಕ? ಇಲ್ಲಿದೆ ವಿವರ

error: Content is protected !!