ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಪಂದ್ಯಾವಳಿ(world cup 2023)ಯ ಫೈನಲ್ ಪಂದ್ಯವನ್ನು ನೆಹರೂ ಕ್ರೀಡಾಂಗಣ(Nehru stadium)ದಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
READ | ಎಚ್.ಎಸ್.ಆರ್.ಪಿ ಗಡುವು ವಿಸ್ತರಣೆ, ಕೊನೆಯ ದಿನಾಂಕ ಯಾವುದು? ಇದುವರೆಗೆ ಎಷ್ಟು ಜನ ಅಳವಡಿಸಿಕೊಂಡಿದ್ದಾರೆ?
ಪತ್ರಿಕಾ ಪ್ರಕಟಣೆಯಲ್ಲಿ ಏನಿದೆ?
2023ನೇ ಸಾಲಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ನಮ್ಮ ದೇಶದಲ್ಲಿ ಆಯೋಜಿಸುತ್ತಿದ್ದು, ಇದರಲ್ಲಿ ಭಾರತ ತಂಡವು ವಿಶ್ವಕಪ್ ಪಂದ್ಯಾವಳಿಯ ಫೈನಲ್‍ಗೆ ತಲುಪಿರುವುದು ಸಂತೋಷದ ವಿಷಯವಾಗಿರುತ್ತದೆ. ಈ ಸಂಬಂಧ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ದೊಡ್ಡ ಸ್ಕ್ರೀನ್‍ಗಳನ್ನು ಅಳವಡಿಸಿ, ಫೈನಲ್ ಪಂದ್ಯಾವಳಿಯನ್ನು ಕ್ರೀಡಾಪಟುಗಳಿಗೆ ಮತ್ತು ಸಾರ್ವಜನಿಕರಿಗೆ ಎಂಸಿ ಆಂಡ್ ಎ ಇವರ ಸಹಯೋಗದೊಂದಿಗೆ ನೇರ ಪ್ರಸಾರ ಮಾಡುವಂತೆ ಆದೇಶಿಸಲಾಗಿದೆ.
ನ.19ರಂದು ನಡೆಯುವ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯವನ್ನು ಮಧ್ಯಾಹ್ನ 1.30 ರಿಂದ ಮುಕ್ತಾಯವಾಗುವವರೆಗೆ ನೆಹರೂ ಕ್ರೀಡಾಂಗಣದಲ್ಲಿ ದೊಡ್ಡ ಎಲ್.ಇ.ಡಿ ಸ್ಟೀನ್‍ಗಳನ್ನು ಅಳವಡಿಸಿ, ನೇರ ಪ್ರಸಾರ ಮಾಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.