Consumer court | ಕೋವಿಡ್‍ನಿಂದ ಮೃತಪಟ್ಟ ಪತಿ, ವಿಮಾ ಹಣ ನೀಡದ್ದಕ್ಕೆ ದಂಡ

Consumer forum

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ದೂರದಾರರಾದ ಸೂರ್ಯಕಲಾ ಅವರಿಗೆ ಅವರ ಪತಿಯ ವಿಮಾ ಪರಿಹಾರ ಮೊತ್ತವನ್ನು ಪಾವತಿಸುವಂತೆ ವಿಮಾ ಕಂಪೆನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ(District Consumer Disputes Redressal Commission)ದ ಅಧ್ಯಕ್ಷರ ಪೀಠವು ಆದೇಶಿಸಿರುತ್ತದೆ.

READ | ಎಚ್.ಎಸ್.ಆರ್.ಪಿ ಗಡುವು ವಿಸ್ತರಣೆ, ಕೊನೆಯ ದಿನಾಂಕ ಯಾವುದು? ಇದುವರೆಗೆ ಎಷ್ಟು ಜನ ಅಳವಡಿಸಿಕೊಂಡಿದ್ದಾರೆ?

2019ರ ಅಕ್ಟೋಬರ್ 23ರಂದು ಸೂರ್ಯಕಲಾ ಅವರ ಪತಿ ದಿ.ಭವಾನಿ ಶಂಕರ್ ವಿಮಾ ಕಂಪೆನಿಯಿಂದ ವಿಮಾ ಪಾಲಿಸಿ ಪಡೆದು 1 ಲಕ್ಷ ರೂ.ಗಳನ್ನು ಎರಡು ವರ್ಷದ ಕಂತುಗಳಾಗಿ ಪಾವತಿಸಿರುತ್ತಾರೆ. ನಂತರ ಕೋವಿಡ್ ಕಾಯಿಲೆಯಿಂದ 2021ರ ಜೂನ್ 3ರಂದು ಮರಣ ಹೊಂದಿರುತ್ತಾರೆ. ದೂರದಾರರಾದ ಸೂರ್ಯಕಲಾ ಎದುರುದಾರ ವಿಮಾ ಕಂಪೆನಿಯಿಂದ ಪತಿ ಮರಣಾನಂತರ ಬರಬೇಕಾದ 5 ಲಕ್ಷ ರೂ. ಪಾಲಿಸಿ ಮೊತ್ತ ಪಾವತಿಸುವಂತೆ ಕೋರಿರುತ್ತಾರೆ. ಆದರೆ ವಿಮಾ ಕಂಪೆನಿಯವರು ವಿಮಾದಾರರು ಪಾಲಿಸಿ ಪಡೆಯುವ ಸಂದರ್ಭದಲ್ಲಿ ಕ್ಯಾನ್ಸರ್ ಕಾಯಿಲೆ ಹೊಂದಿದ್ದು ಆ ವಿಷಯ ಮರೆಮಾಚಿದ್ದರು. ಇದು ವಿಮಾ ಪಾಲಿಸಿಯ ನಿಯಮಗಳ ಉಲ್ಲಂಘನೆಗೆ ಒಳಪಡುತ್ತದೆಂದು ವಿಮಾ ಪರಿಹಾರ ಅರ್ಜಿಯನ್ನು ನಿರಾಕರಿಸಿರುತ್ತಾರೆ.
ನಿರಾಕರಣೆ ಸಮಂಜಸವಲ್ಲ
ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವಾಸ್ತವಾಂಶಗಳು, ಎದುರುದಾರರ ಪ್ರತ್ಯುತ್ತರ ಮತ್ತು ಎರಡು ಪಕ್ಷದವರು ಹಾಜರುಪಡಿಸಿದ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ವಿಮಾದಾರರು ಕೋವಿಡ್-19 ನ್ಯೂಮೊನಿಯಾ ಕಾರಣದಿಂದ ಮೃತಪಟ್ಟಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಎದುರುದಾರ ವಿಮಾ ಕಂಪೆನಿಯ ನಿರಾಕರಣೆ ಸಮಂಜಸವಲ್ಲವೆಂದು ಪರಿಗಣಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸಿರುತ್ತದೆ.
ಅದರಂತೆ ಎದುರುದಾರರು ಈಗಾಗಲೇ 1 ಲಕ್ಷ ರೂ. ದೂರುದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು ಬಾಕಿ ಉಳಿದ ವಿಮಾ ಪರಿಹಾರ ಮೊತ್ತ 4 ಲಕ್ಷ ರೂ.ಗಳನ್ನು ಶೇ.6 ವಾರ್ಷಿಕ ಬಡ್ಡಿ ಸಮೇತ ಮತ್ತು 5 ಸಾವಿರ ರೂ.ಗಳನ್ನು ವ್ಯಾಜ್ಯದ ಖರ್ಚು ವೆಚ್ಚದ ಮೊತ್ತವನ್ನು ದೂರುದಾರರಿಗೆ ಪಾವತಿಸತಕ್ಕದ್ದು ಎಂದು ಆದೇಶಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಮಹಿಳಾ ಸದಸ್ಯರಾದ ಸವಿತಾ ಬಿ.ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಭಾಂಡ್ಯ ಅವರ ಪೀಠವು ಆದೇಶಿಸಿದೆ.

Free Job alert | ಬೆರಳಚ್ಚುಗಾರ, ಶೀಘ್ರ ಲಿಪಿಗಾರ ಹುದ್ದೆಗಳ ಭರ್ತಿಗೆ ಅಧಿಸೂಚನೆ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

error: Content is protected !!