Seetaranya pravesh | ‘ಸೀತಾರಣ್ಯ ಪ್ರವೇಶ’ ನಾಟಕ ಪ್ರದರ್ಶನ, ಏನು ಈ ನಾಟಕದ ವಿಶೇಷ? ಯಾರು ಈ ಸಕ್ಕರಿ ಬಾಳಾಚಾರ್ಯರು?

Sasvehalli satish

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಡಿ.24ರಂದು ಸಂಜೆ 6 ಗಂಟೆಗೆ ಆಧುನಿಕ ಕನ್ನಡ ರಂಗ ಭೂಮಿ ದಿನದ ಅಂಗವಾಗಿ ಸಕ್ಕರಿ ಬಾಳಾಚಾರ್ಯ ಶಾಂತ ಕವಿಗಳು (sakkari balacharya shantakavi) 1889ರಲ್ಲಿ ರಚಿಸಿದ ‘ಸೀತಾರಣ್ಯ ಪ್ರವೇಶ’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಹೊಂಗಿರಣ ಸಂಸ್ಥೆಯ ಮುಖ್ಯಸ್ಥ ಸಾಸ್ವೆಹಳ್ಳಿ ಸತೀಶ್ (sasvehalli satish) ಹೇಳಿದರು‌.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡದ ಸಕ್ಕರಿ ಬಾಳಾಚಾರ್ಯ ಟ್ರಸ್ಟ್, ಶಿವಮೊಗ್ಗ ರಂಗಾಯಣ (Shivamogga Rangayana), ಹೊಂಗಿರಣ (Hongirana) ಹಾಗೂ ಕಲಾವಿದರ ಒಕ್ಕೂಟದ ಸಹಯೋಗದಲ್ಲಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

Drama Logo

READ | ಕೋವಿಡ್ ಗೆ ಶಿವಮೊಗ್ಗದಲ್ಲಿ ಏನೆಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ? ಡಿಸಿ ಖಡಕ್ ವಾರ್ನಿಂಗ್

ನಾಟಕಕ್ಕೆ ₹30 ಪ್ರವೇಶ ಶುಲ್ಕ
ಅಧ್ಯಕ್ಷತೆಯನ್ನು ಕಲಾವಿದರ ಒಕ್ಕೂಟದ ಅಧ್ಯಕ್ಷ ಕಾಂತೇಶ್ ಕದರಮಂಡಲಗಿ ವಹಿಸಲಿದ್ದಾರೆ. ಶಿವಮೊಗ್ಗ ರಂಗಾಯಣ ಆಡಳಿತಾಧಿಕಾರಿ ಡಾ.ಎ.ಸಿ.ಶೈಲಜಾ, ಧಾರವಾಡದ ರಂಗಕರ್ಮಿ ಡಾ.ಪ್ರಕಾಶ್ ಗರುಡ ಉಪಸ್ಥಿತರಿರುವರು. ನಾಟಕಕ್ಕೆ ₹30 ಪ್ರವೇಶ ಶುಲ್ಕವಿದೆ ಎಂದು ಹೇಳಿದರು.
ಸಕ್ಕರಿ ಬಾಳಾಚಾರ್ಯ ಬಗ್ಗೆ ಒಂದಿಷ್ಟು ಮಾಹಿತಿ
ಆಧುನಿಕ ನಾಟಕ ಪಿತಾಮಹ ಕೀರ್ತನಕಾರರೆಂದು ಎಂದು ಪ್ರಸಿದ್ಧರಾದ ಶಾಂತಕವಿಗಳ ಪೂರ್ಣ ಹೆಸರು ಸಕ್ಕರಿ ಬಾಳಾಚಾರ್ಯ. ಅವರು 1856ರಲ್ಲಿ ಜನಿಸಿದರು. ಹುಟ್ಟಿದ ಸ್ಥಳದ ಕುಲದೈವವಾದ ಹಾವೇರಿ ಜಿಲ್ಲೆಯ ಸಾತೇನಹಳ್ಳಿಯ ಶಾಂತೇಶನ ಹೆಸರನ್ನೇ ತಮ್ಮ ಕಾವ್ಯನಾಮವಾಗಿ ಇಟ್ಟುಕೊಂಡಿದ್ದರು. ಇವರ ಪ್ರಯತ್ನದಿಂದ ಉತ್ತರ ಕರ್ನಾಟಕದ ಪ್ರಪ್ರಥಮ ನಾಟಕ ಮಂಡಳಿ, ಶ್ರೀ ವೀರನಾರಾಯಣ ಪ್ರಸಾದಿಕ ಕೃತಪುರ ನಾಟಕ ಮಂಡಳಿಯು 1874 ರಲ್ಲಿ ಗದಗದಲ್ಲಿ ಹುಟ್ಟುಕೊಂಡಿತು.
ಇದೇ ಈ ಭಾಗದಲ್ಲಿ ಇನ್ನೂ ಹಲವು ನಾಟಕ ಮಂಡಳಿಗಳ ಉಗಮಕ್ಕೆ ಸ್ಫೂರ್ತಿಯಾಯಿತು. ಇವರ ಮೊದಲ ನಾಟಕ ಪ್ರದರ್ಶನವಾದ ದಿನವನ್ನು ಆಧುನಿಕ ಕನ್ನಡ ನಾಟಕ ದಿನವಾಗಿ ಆಚರಿಸಲಾಗುತ್ತ ಬರುತ್ತಿದೆ. ಶಾಂತಕವಿಗಳನ್ನು ಆಧುನಿಕ ನಾಟಕ ಪಿತಾಮಹ ಎಂದೂ ಕರೆಯುತ್ತಾರೆ ಎಂದು ಮಾಹಿತಿ ನೀಡಿದರು.
ಇವರು ಸುಮಾರು 27 ನಾಟಕಗಳನ್ನು ಬರೆದಿದ್ದಾರೆ. ಅದರಲ್ಲಿ ಮೊದಲು ಸಿಕ್ಕಿದ್ದು ‘ಉಷಾಹರಣ’. ಈ ನಾಟಕ ಪ್ರದರ್ಶನ ಕಂಡು ಬಹಳಷ್ಟು ಪ್ರಸಿದ್ದಿ ಪಡೆದಿದೆ. ಈಗ ಅವರ ಎರಡನೇ ನಾಟಕ ‘ಸೀತಾರಣ್ಯ ಪ್ರವೇಶ’ ಧಾರವಾಡದಲ್ಲಿ ಮೊದಲ ಪ್ರದರ್ಶನ ಕಂಡಿದೆ. ಉಮೇಶ್ ಸಾಲಿಯಾನ್ ನಿರ್ದೇಶನ ಮಾಡಿದ್ದಾರೆ ಎಂದರು.
ಉದಯ್‌ಕುಮಾರ್ ಉಪಸ್ಥಿತರಿದ್ದರು.

Jumping spider | ಪಶ್ಚಿಮಘಟ್ಟದಲ್ಲಿ ಹೊಸ ಪ್ರಭೇದದ ‘ಜಂಪಿಂಗ್ ಸ್ಪೈಡರ್’ ಪತ್ತೆ

 

error: Content is protected !!