ಭದ್ರಾವತಿಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ, ಗಾಂಜಾ ಸೀಜ್

 

 

ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ಗಾಂಜಾ ಸಾಗಿಸುತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಆತನಿಂದ 420 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಭದ್ರಾವತಿಯ ಇಂದಿರಾ ನಗರ ಮಹಮ್ಮದ್ ಅರ್ಷಾನ್(23) ಬಂಧಿತ.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ
ಈತ ಶುಕ್ರವಾರ ಸಂಜೆ ಜಟ್ ಪಟ್ ನಗರ ಕಡೆಯಿಂದ ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾನೆಂಬ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಹಳೇ ನಗರ ಪೊಲೀಸ್ ಠಾಣೆ ಪಿಎಸ್ಐ ಮತ್ತು ಸಿಬ್ಬಂದಿ ತಂಡವು ದಾಳಿ‌ನಡೆಸಿದೆ.
ಆರೋಪಿಯ ಬಳಿಯಿಂದ ಅಂದಾಜು ಮೌಲ್ಯ 8,000 ರೂಪಾಯಿಗಳ 420 ಗ್ರಾಂ. ಒಣ ಗಾಂಜಾವನ್ನು ವಶಪಡಿಸಿಕೊಂಡು ಕಲಂ20(ಬಿ)(ii)(a) ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗುತ್ತಿದೆ. ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!