Selfie | ಶಿವಮೊಗ್ಗದಲ್ಲಿ ಸೆಲ್ಫಿ ದುರಂತ, ಪ್ರಾಣ ಕಳೆದುಕೊಂಡ ಯುವಕ, ಎಲ್ಲಿ ನಡೀತು ಘಟನೆ?

Tunga river

 

 

ಸುದ್ದಿ‌ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ಸೆಲ್ಫಿ ತೆಗೆಯುವ ವೇಳೆ ಯುವಕನೊಬ್ಬ ಆಯತಪ್ಪಿ ತುಂಗಾನದಿಗೆ ಬಿದ್ದು ಮೃತಪಟ್ಟ ಘಟನೆ ಪಟ್ಟಣದ ಬಾಳೆಬೈಲು ಸರ್ಕಾರಿ ಪ್ರಥಮ‌ ದರ್ಜೆ ಕಾಲೇಜು ಹಿಂಭಾಗ ಸಂಭವಿಸಿದೆ.

READ | ತಮ್ಮನನ್ನು ರಕ್ಷಿಸಿ ತನ್ನ ಜೀವ ಕಳೆದುಕೊಂಡ ಅಕ್ಕ, ಇದು ಹೃದಯ ಹಿಂಡುವ ಘಟನೆ

ಉತ್ತರ ಪ್ರದೇಶ ಮೂಲದ ಅಬ್ದುಲ್ ಕರೀಮ್ (24) ಎಂಬಾತ ಮೃತಪಟ್ಟಿದ್ದಾನೆ. ಸೆಲ್ಫಿ ತೆಗೆಯುವಾಗ ಈತ ಆಯತಪ್ಪಿ‌ ಬಿದ್ದಿರುವುದಾಗಿ ಹೇಳಲಾಗಿದ್ದು, ಅಲ್ಲಿಯೇ ಇದ್ದ ಸ್ನೇಹಿತರು ಆತನ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ, ಪ್ರಯತ್ನ ಫಲಿಸಿಲ್ಲ ಎಂದು ತಿಳಿದುಬಂದಿದೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!