ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA (Crime news): ಸಾಗರ (sagar)/ತಾಲೂಕು ಜೋಗ್ ಫಾಲ್ಸ್ (Jogfalls) ನಲ್ಲಿ ಕುಡಿದು ವಾಹನ ಚಾಲನೆ ಮಾಡಿದ ಸಂತೋಷ್ ಎಂಬಾತನಿಗೆ ಸಾಗರ ನ್ಯಾಯಾಲಯ ₹10,000 ದಂಡ ವಿಧಿಸಿ ಆದೇಶಿಸಿದೆ. ಈತನ ವಿರುದ್ಧ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರ ಕಡಿದವನ ಬಂಧನ
KUMSI: ಸಾಗುವಾನಿ ಮರವನ್ನು ಅಕ್ರಮವಾಗಿ ಕಡಿದು ಸಾಗಿಸುತ್ತಿದ್ದ ಕುಂಸಿ ಗ್ರಾಮದ ಪ್ರವೀಣಯ್ಯ (43) ಎಂಬಾತನನ್ನು ಬಂಧಿಸಲಾಗಿದೆ.
ಭಾನುವಾರ ಸಂಜೆ ಸೂಡೂರು ಮೀಸಲು ಅರಣ್ಯ ವ್ಯಾಪ್ತಿಯ ಗುರುಪಾದಮಟ್ಟಿ ಕಾಡಿನಲ್ಲಿ ಬಮರ ಕಡಿದು ತುಂಡುಗಳನ್ನು ಸೈಕಲ್ ನಲ್ಲಿ ಸಾಗಿಸುತ್ತಿದ್ದಾಗ ಅರಣ್ಯ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.
READ | ಮಳೆ ಅನಾಹುತ, 7 ಮನೆ, 143 ಶಾಲೆ ಕಟ್ಟಡ ಡ್ಯಾಮೇಜ್, 3 ಸಾವು, ಜಿಲ್ಲೆಯಲ್ಲಿ ಇನ್ನೇನಾಗಿದೆ?
ಚಾಲಕನ ನಿಯಂತ್ರಣ ತಪ್ಪಿದ ಬಸ್
HOSANAGARA: ಶಿವಮೊಗ್ಗದಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಖಾಸಗಿ ಸಂಸ್ಥೆಯ ಬಸ್ ಕೊಲ್ಲೂರು ಘಾಟಿಯಲ್ಲಿ ಸೋಮವಾರ ಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕ ವಾಲಿದ್ದು, ಬಸ್‌ನಲ್ಲಿದ್ದ ಶಾಲೆ ಮಕ್ಕಳು ಸೇರಿದಂತೆ ಅನೇಕರಿಗೆ ಸಣ್ಣ ಪುಟ್ಟಗಾಯಗಳಾಗಿವೆ.
ಕೊಲ್ಲೂರು ಹಾಗೂ ಕುಂದಾಪುರದ ಶಾಲೆ, ಕಾಲೇಜುಗಳಿಗೆ ತೆರಳುತ್ತಿದ್ದ ನಿಟ್ಟೂರು, ಸಂಪೆಕಟ್ಟೆ ಸುತ್ತಮುತ್ತಲಿನ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್ ನಲ್ಲಿದ್ದರು. ಐದು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪ್ರಾಣಹಾನಿಯಾಗಿಲ್ಲ.