ಇದೇ ಘಟನೆ ಬೆಳಗ್ಗೆಯಾಗಿದ್ದಿದ್ದರೆ, ಪರಿಸ್ಥಿತಿಯೇ ಬೇರೆಯದ್ದಾಗಿರುತ್ತಿತ್ತು, ಏನಂತಾರೆ ಸ್ಥಳೀಯರು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶನಿವಾರ ತಡ ರಾತ್ರಿ ಸಂಭವಿಸಿರುವ ಬೆಂಕಿ ಅನಾಹುತವೇನಾದರೂ ಬೆಳಗ್ಗೆಯಾಗಿದ್ದಿದ್ದರೆ ಪರಿಸ್ಥಿತಿಯೇ ಬೇರೆಯ ರೀತಿ ಇರುತ್ತಿತ್ತು ಎನ್ನುತ್ತಾರೆ ಗಾಂಧಿ ಬಜಾರ್ ನಿವಾಸಿಗಳು.

VIDEO REPORT

ಸದಾ ಜನಜಂಗುಳಿಯಿಂದ ತುಂಬಿರುವ ಗಾಂಧಿ ಬಜಾರ್ ನಲ್ಲಿ ಬೆಳಗ್ಗೆ ಹೊತ್ತು ವಾಹನ ಓಡಾಟಕ್ಕೂ ಭಾರಿ ತೊಂದರೆಯಾಗುತ್ತದೆ. ಇಕಟ್ಟಾದ ರಸ್ತೆ ಆಗಿರುವುದರಿಂದ ಸಹಜವಾಗಿಯೇ ಟ್ರಾಫಿಕ್ ಹೆಚ್ಚಿರುತ್ತದೆ.

ರಾತ್ರಿ ಹೊತ್ತಾಗಿದ್ದರಿಂದ ಯಾರೂ ಇರಲಿಲ್ಲ. ಬೆಳಗ್ಗೆ ಕಾರ್ಮಿಕರು ಕಾರ್ಯನಿರ್ವಹಿಸುತ್ತಿರುತ್ತಾರೆ. ವಾಹನಗಳನ್ನು ನಿಲ್ಲಿಸಲಾಗಿರುತ್ತದೆ. ಬೆಂಕಿಯ ಕೆನ್ನಾಲಗೆ ಇನ್ನಷ್ಟು ಹೆಚ್ಚುವ ಸಾಧ್ಯತೆಯೂ ಇತ್ತು. ದ್ವಿಚಕ್ರ ವಾಹನ, ಕಾರುಗಳ ನಿಲುಗಡೆಯೂ ಮಾಡುವುದರಿಂದ ಅಪಘಾತದ ಭೀಕರತೆ ಇನ್ನಷ್ಟು ಕರಾಳವಾಗುವ ಸಾಧ್ಯತೆಯೂ ಇತ್ತು.

ಮನೆ, ವಾಣಿಜ್ಯ ಸಂಕೀರ್ಣ | ಗಾಂಧಿ ಬಜಾರ್ ನಲ್ಲಿ ವಾಣಿಜ್ಯ ಸಂಕೀರ್ಣದೊಂದಿಗೆ ಸಾರ್ವಜನಿಕರ ವಾಸವೂ ಇರುವುದರಿಂದ ಶನಿವಾರ ಬೆಂಕಿ ತಗಲಿರುವ ವಿಚಾರ ತಕ್ಷಣ ಗೊತ್ತಾಗಿದೆ. ಮಾತಾಶ್ರೀ ನಾವೆಲ್ಟಿ ಸೆಂಟರ್ ಪಕ್ಕದಲ್ಲೇ ಮನೆಯೂ ಇರುವುದರಿಂದ ಬೆಂಕಿ ತಾಕಿ ಹೆಚ್ಚುವ ಹೊತ್ತಿಗೆ ಗಮನಕ್ಕೆ ಬಂದಿದೆ. ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಇಲ್ಲದಿದ್ದರೆ, ಒಂದಕ್ಕೊಂದು ತಾಕಿಕೊಂಡೇ ಅಂಗಡಿಗಳು ಇರುವುದರಿಂದ ಸಹಜವಾಗಿಯೇ ಘಟನೆಯ ಭೀಕರತೆ ಇನ್ನಷ್ಟು ಕರಾಳ ರೂಪ ತಾಳುವ ಸಾಧ್ಯತೆಯೂ ಇತ್ತು ಎನ್ನುವುದು ಸ್ಥಳೀಯರ ಅಭಿಮತ.
ಸುಟ್ಟ ಭಸ್ಮ | ಮಾತಾಶ್ರೀ ನಾವೆಲ್ಟಿ ಸೆಂಟರ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಎಲ್ಲ ಸಾಮಗ್ರಿಗಳು ಕರಕಲಾಗಿವೆ. ಗಾಂಧಿ ಬಜಾರ್ ನಲ್ಲಿ ಸಂಜೆಯವರೆಗೂ ಸುಟ್ಟಿದ ವಾಸನೆ ಮೂಗಿಗೆ ರಾಚುತಿತ್ತು. ದಟ್ಟ ಹೊಗೆಯಿಂದಾಗಿ ಅಕ್ಕಪಕ್ಕದ ಕಟ್ಟಡಗಳಿಗೂ ಅಲ್ಪಸ್ವಲ್ಪ ಹಾನಿಯಾಗಿದೆ.

error: Content is protected !!