ಭದ್ರಾವತಿ ಗಲಾಟೆಗೆ ರೀಯಲ್ ಕಾರಣವೇನು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿಯಲ್ಲಿ ಇತ್ತೀಚೆಗೆ ನಡೆದ ಗಲಾಟೆಗೆ ಕಾರಣ ಜೈ ಶ್ರೀರಾಮ್ ಘೋಷಣೆ ಅಲ್ಲ. ಬದಲಿಗೆ ಅಲ್ಲಿ ಹಾಸಲಾಗಿದ್ದ ದುಬಾರಿ ಬೆಲೆಯ ಮ್ಯಾಟ್ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರೇಗೌಡ ತಿಳಿಸಿದರು.
ಶುಕ್ರವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬಡ್ಡಿ ಪಂದ್ಯಾವಳಿಯ ಅಂತಿಮ ದಿನದಂದು ನಡೆದ ಗಲಾಟೆಗೆ ಜೈ ಶ್ರೀರಾಮ್ ಘೋಷಣೆಗೆ ವಿರೋಧ ವ್ಯಕ್ತಪಡಿಸಿದ್ದು ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಕಬಡ್ಡಿ ಪಂದ್ಯಕ್ಕಾಗಿ ಹತ್ತು ಲಕ್ಷ ರೂಪಾಯಿ ಮೌಲ್ಯದ ಮ್ಯಾಟ್ ಗಳನ್ನು ತರಲಾಗಿತ್ತು. ಪಂದ್ಯ ಮುಗಿದ ನಂತರ ಅದರ ಮೇಲೆಯೇ ತಂದಿಡಲಾಗಿತ್ತು. ಒಂದುವೇಳೆ, ಪಟಾಕಿ ಹಾರಿಸಿದರೆ ಮ್ಯಾಟ್ ಹಾಳಾಗುತ್ತವೆ ಎಂದಿದ್ದಕ್ಕೆ ಗಲಾಟೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

error: Content is protected !!