26ರಂದು ಶಿವಮೊಗ್ಗ ಬಂದ್ ಇಲ್ಲ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೃಷಿ ಕಾಯ್ದೆ ವಿರುದ್ಧ ಮಾರ್ಚ್ 26ರಂದು ಭಾರತ್ ಬಂದ್ ಕರೆ ನೀಡಲಾಗಿದೆ. ಆದರೆ, ಅಂದು ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೆಳಗ್ಗೆ 11 ಕ್ಕೆ ಕಾಯ್ದೆಗಳ ಪ್ರತಿ ದಹಿಸಿ ಪ್ರತಿಭಟನಾ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ರೈತ ಮುಖಂಡ ಎಚ್.ಆರ್.ಬಸವರಾಜಪ್ಪ ಹೇಳಿದರು.

ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ!

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗದಲ್ಲಿ ಈಗಾಗಲೇ ಪ್ರಗತಿಪರ ಸಂಘಟನೆಗಳು ಹಲವು ಕಾರ್ಯಕ್ರಮ ಏರ್ಪಡಿಸಿವೆ. ಹೀಗಾಗಿ, ಭಾರತ್ ಬಂದ್ ದಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಸಭೆ ಮಾತ್ರ ಮಾಡಲಾಗುವುದು ಎಂದರು.

ಸಭೆ ಆಯೋಜನೆಗೆ ನೆಹರೂ ಕ್ರೀಡಾಂಗಣ ಮುಂಭಾಗದ ಜಾಗ ಕೇಳಿದ್ದೇವು. ಆದರೆ, ಅದು ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಮಾತ್ರ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೀಗ, ಅಲ್ಲಿಯೇ ಬಿಜೆಪಿ ಕಾರ್ಯಕ್ರಮವೊಂದು ನಡೆಯಲಿದೆ. ಅದಕ್ಕೆ ಪರವಾನಗಿಯೂ ನೀಡಲಾಗಿದೆ. ಹಾಗಾದರೆ ಚಕ್ರವರ್ತಿ ಸೂಲಿಬೆಲೆ ಅಲ್ಲಿ ಬಂದು ಭರತನಾಟ್ಯ ಮಾಡುತ್ತಾರೆ ನಾವೂ ನೋಡುತ್ತೇವೆ.
– ಕೆ.ಪಿ.ಶ್ರೀಪಾಲ್, ವಕೀಲರು

ಬೆಂಗಳೂರಿನಲ್ಲಿ ರೈತ ಮಹಾ ಪಂಚಾಯತ್ | ಏಪ್ರಿಲ್ 26ರಂದು ಬೆಂಗಳೂರಿನಲ್ಲಿ ರೈತ ಮಹಾ ಪಂಚಾಯತ್ ಏರ್ಪಡಿಸಲಾಗಿದೆ. ಈ ಕಾರಣದಿಂದ ಏಪ್ರಿಲ್ 1ರಂದು ರೈತ ಮುಖಂಡ ದರ್ಶನ್ ಪಾಲ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ ಎಂದರು.

ಟಿಕಾಯತ್ ವಿರುದ್ಧ ಕೇಸ್, ಆಕ್ರೋಶ | ವಕೀಲ ಕೆ.ಪಿ.ಶ್ರೀಪಾಲ್ ಮಾತನಾಡಿ, ಯಾವುದೇ ಪ್ರಚೋದನಕಾರಿ ಭಾಷಣ ಮಾಡದಿದ್ದರೂ ಟಿಕಾಯತ್ ವಿರುದ್ಧ ಭಾರತೀಯ ದಂಡ ಸಂಹಿತ ಕಲಂ 153 ಅಡಿ ಪ್ರಕರಣ ದಾಖಲಿಸಲಾಗಿದೆ. ಇದು ದುರುದ್ದೇಶ ಪೂರಿತ ನಡೆಯಾಗಿದೆ. ಪೊಲೀಸರು ಸರ್ಕಾರದ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದರು ಆರೋಪಿಸಿದರು.
ಪ್ರಮುಖರಾದ ಕೆ.ಎಲ್.ಅಶೋಕ್, ಯಶವಂತ್ ರಾವ್ ಗೋರ್ಪಡೆ, ಎನ್.ರಮೇಶ್, ಯೋಗೇಶ್, ರಾಘವೇಂದ್ರ, ವೀರೇಶ್, ಜಗದೀಶ್, ಅನನ್ಯ ಶಿವು, ಪಾಲಾಕ್ಷಿ, ಹಾಲೇಶಪ್ಪ, ಶಿ.ಜು.ಪಾಶಾ, ವಿಶ್ವನಾಥ್ ಕಾಶಿ ಉಪಸ್ಥಿತರಿದ್ದರು.

error: Content is protected !!