ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಎರಡನೇ ದಿನಕ್ಕೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಬಿಡುವಿನ ಅವಧಿಯಲ್ಲಿ ಜನಸಂಚಾರ ಜೋರಾಗಿತ್ತು. ಆದರೆ, 10 ಗಂಟೆಯ ಬಳಿಕ ನಗರ ಸ್ತಬ್ಧವಾಗಿದೆ.
ಅಮೀರ್ ಅಹ್ಮದ್ ವೃತ್ತ ಸೇರಿದಂತೆ ಹಲವೆಡೆ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು. ಪೊಲೀಸ್ ಅಧಿಕಾರಿಗಳು ನಗರ ಸಂಚಾರದಲ್ಲಿದ್ದು, ವೀಕೆಂಡ್ ಕರ್ಫ್ಯೂ ಮೇಲೆ ಕಣ್ಣಿಟ್ಟಿದ್ದಾರೆ.