ಶಿವಮೊಗ್ಗ ನಗರದಲ್ಲಿ ಟ್ರಾಫಿಕ್ ಜಾಮ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಾಲ್ಕು ದಿನಗಳ ಕಠಿಣ ಲಾಕ್ ಡೌನ್ ಬಳಿಕ ಸೋಮವಾರದಿಂದ ಜನಜೀವನ ಯಥಾಸ್ಥಿತಿಗೆ ಮರಳಿದೆ. ಆದರೆ, ಸಾರ್ವಜನಿಕರು ಕಳೆದ ನಾಲ್ಕು ದಿನಗಳಿಂದ ಯಾವುದೇ ವಸ್ತುಗಳು ಖರೀದಿಸಲು ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ಏಕಾಏಕಿ ಎಲ್ಲರೂ ರಸ್ತೆಗಿಳಿದ ಪರಿಣಾಮ ನಗರದೆಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ.

READ | ನಾಲ್ಕು ದಿನಗಳ ಕಠಿಣ ಲಾಕ್ ಡೌನ್ ಬಳಿಕ ಹೇಗಿದೆ ಶಿವಮೊಗ್ಗ, ಜನಸಂಚಾರ, ವಹಿವಾಟು ಇದೆಯೇ?

ಗಾಂಧಿ ಬಜಾರ್ ಸಗಟು ವ್ಯಾಪಾರ, ಎಪಿಎಂಸಿ ತೆರೆದಿದ್ದರಿಂದ ಅಗತ್ಯ ವಸ್ತುಗಳ ಖರೀದಿಗೆ ಜನ ದೌಡಾಯಿಸಿದರು. ಪರಿಣಾಮ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

lock downರಸ್ತೆಗಳು ಬಂದ್, ಜನಸಂಚಾರ ಅಸ್ತವ್ಯಸ್ತ | ಲಾಕ್ ಡೌನ್ ನಿಂದಾಗಿ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೆಡ್ ಹಾಕಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇದರಿಂದಾಗಿ, ಎಲ್ಲ ವಾಹನಗಳು ಮುಖ್ಯ ರಸ್ತೆಯಲ್ಲೇ ಓಡಾಡುತ್ತಿರುವುದರಿಂದಲೂ ಟ್ರಾಫಿಕ್ ಜಾಮ್ ಆಗುತ್ತಿದೆ.
ಬೆಳಗ್ಗೆ 10 ಗಂಟೆಯವರೆಗೆ ಮಾತ್ರ ಸಾರ್ವಜನಿಕರ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಪೊಲೀಸ್ ಇಲಾಖೆ ನಿರಂತರ ಪ್ರಕರಣಗಳನ್ನು ದಾಖಲಿಸುತ್ತಿದ್ದರೂ ಅನಗತ್ಯವಾಗಿ ಓಡಾಡುವವರ ಸಂಖ್ಯೆ ಕಡಿಮೆಯಾಗಿಲ್ಲ.

https://www.suddikanaja.com/2021/05/04/high-police-security-in-shivamogga-city/

error: Content is protected !!