ಮಗನಿಂದ ಅಪ್ಪನ ಸಾವಿನ ಸುದ್ದಿ ಮುಚ್ಚಿಟ್ಟ ಕುಟುಂಬ, ಕೊನೆಗೆ ಮಗನನ್ನೂ ಬಲಿ ಪಡೆದ ಕೊರೊನಾ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ವ್ಯಂಗ್ಯ ಚಿತ್ರಕಾರರೂ ಆಗಿದ್ದ ಶಿಕ್ಷಕ ಗಂಗಾಧರ್ ಅಡ್ಡೇರಿ (43) ಅವರನ್ನು ಕೊರೊನಾ ಬಲಿ ಪಡೆದಿದೆ. ವಿಚಿತ್ರವೆಂದರೆ, ಕೊರೊನಾ ಸೋಂಕಿನಿಂದ ಬಳಲಿದ್ದ ಇವರಿಗೆ ತಂದೆಯ ಸಾವಿನ ಸುದ್ದಿ ಕೂಡ ತಿಳಿಸಿರಲಿಲ್ಲ. ಆದರೆ, ಕ್ರೂರಿ

READ | 3100 ಕೆಜಿ ಈರುಳ್ಳಿ ಖರೀದಿಸಿ ರೈತರಿಗೆ ಜೀವ ನೀಡಿದ ರಿಯಲ್ ಸ್ಟಾರ್ ಉಪೇಂದ್ರ, ನೆಟ್ಟಿಗರಿಂದ ಶ್ಲಾಘನೆ, ಇದೆಲ್ಲ ಹೇಗಾಯ್ತು ಗೊತ್ತಾ?

ಕೊರೊನಾ ಒಂದೇ ವಾರದಲ್ಲಿ ಒಂದೇ ಕುಟುಂಬದ ಒಬ್ಬರು ಸದಸ್ಯರನ್ನು ಬಲಿ ಪಡೆದಿದೆ.

ಮೂಲತಃ ಹೊಸನಗರ ತಾಲೂಕಿನ ರಿಪ್ಪನ್‍ಪೇಟೆಯವರಾದ ಗಂಗಾಧರ್ ಅವರು ಹಲವು ಪತ್ರಿಕೆಗಳಲ್ಲಿ ತಮ್ಮ ವ್ಯಂಗ್ಯ ಚಿತ್ರಗಳ ಮೂಲಕ ಮನೆ ಮಾತಾಗಿದ್ದರು. ಗಂಗಾಧರ್ ಅವರು ಬೆಂಗಳೂರಿನ ಸರ್ಕಾರಿ ಪ್ರೌಢ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಲಾಕ್ ಡೌನ್ ಹಿನ್ನೆಲೆ ತಮ್ಮೂರಿ ಮರಳಿದ್ದರು. ಆದರೆ, ಕೊರೊನಾ ಸೋಂಕಿಗೆ ಸೋಮವಾರ ಮೃತಪಟ್ಟಿದ್ದಾರೆ. ಇವರಿಗೆ ಪತ್ನಿ, ಇಬ್ಬರು ಮಕ್ಕಳು, ತಾಯಿ ಹಾಗೂ ಸಹೋದರ ಇದ್ದಾರೆ.
ಗಂಗಾಧರ್ ಅವರ ತಂದೆ ಇತ್ತೀಚೆಗೆ ಕೊರೊನಾದಿಂದಲೇ ನಿಧನರಾಗಿದ್ದರು. ತಂದೆಯ ಅನಾರೋಗ್ಯದ ವಿಚಾರ ಗಂಗಾಧರ್ ಅವರಿಗೆ ಗೊತಿತ್ತು. ಆದರೆ, ಮೃತಪಟ್ಟ ವಿಚಾರ ಗೊತ್ತಿರಲಿಲ್ಲ ಎಂದು ಹೇಳಲಾಗಿದೆ.

https://www.suddikanaja.com/2021/04/29/groom-died-due-to-corona/

error: Content is protected !!