ರಸ್ತೆ ಮೇಲೆ ತರಕಾರಿ ಸುರಿದ ಮಾರಾಟಗಾರ, ಪೊಲೀಸ್ ಸಮ್ಮುಖದಲ್ಲಿ ವ್ಯಾಪಾರಿಯಿಂದಲೇ ಕ್ಲೀನ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಓ.ಟಿ.ರಸ್ತೆಯಲ್ಲಿ ತರಕಾರಿ ಮಾರಾಟಗಾರನೊಬ್ಬ ರಸ್ತೆಯ ಮೇಲೆಯೇ ತರಕಾರಿಗಳನ್ನು ಸುರಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ನಂತರ, ಪೊಲೀಸರು ಸ್ಥಳಕ್ಕೆ ಬಂದು ತರಕಾರಿ ಸುರಿದ ವ್ಯಾಪಾರಿಯಿಂದಲೇ ಸ್ವಚ್ಛಗೊಳಿಸಿದ್ದಾರೆ.

VIDEO REPORT 

READ | ಕೊರೊನಾದಿಂದ ಮೃತಪಟ್ಟವನ ಕೊನೆಯ ಸಲ ಮುಖ ನೋಡಲು ಹೋದಾಗ ಕುಟುಂಬದವರಿಗೆ ಕಾದಿತ್ತು ಶಾಕ್! ಆಗಿದ್ದೇನು ಗೊತ್ತಾ?

ಓ.ಟಿ.ರಸ್ತೆಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಮಾಸ್ಕ್ ಧರಿಸುವಂತೆ ಸೂಚನೆ ನೀಡಿದ್ದಾರೆ. ಹಾಗೂ ಸಾಮಾಜಿಕ ಅಂತರ ಕಾಪಾಡುವಂತೆ ಸೂಚನೆ ನೀಡಿದ್ದಾರೆ. ಆದರೂ ಆತ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇದು ಲಾಕ್ ಡೌನ್ ನಿಯಮ ಉಲ್ಲಂಘಿಸಿದಂತಾಗುತ್ತದೆ ಎಂದು ಹೇಳಿದ್ದಕ್ಕೆ ಸಿಡಿಮಿಡಿಗೊಂಡ ವ್ಯಾಪಾರಿ ಓಟಿ ರಸ್ತೆಯಲ್ಲಿರುವ ವೃತ್ತದಲ್ಲಿ ತರಕಾರಿಗಳನ್ನು ನೆಲಕ್ಕೆ ಸುರಿದಿದ್ದಾನೆ. ಅಧಿಕಾರಿಗಳು ಅದನ್ನು ತೆಗೆಯುವಂತೆ ತಿಳಿಸಿದರು. ವಿತ್ತಂಡವಾದ ಮಾಡಿದ್ದಾನೆ ಎನ್ನಲಾಗಿದೆ.
ಬಳಿಕ ದೊಡ್ಡಪೇಟೆ ಪೊಲೀಸರು ಸ್ಥಳಕ್ಕೆ ಬಂದು ವ್ಯಾಪಾರಿಯನ್ನು ಕರೆದುಕೊಂಡು ಬಂದಿದ್ದಾರೆ. ಆತನಿಂದಲೇ ರಸ್ತೆಯ ಮೇಲೆ ಸುರಿದ ತರಕಾರಿಯನ್ನು ಸ್ವಚ್ಛಗೊಳಿಸಿದ್ದಾರೆ.

error: Content is protected !!