ಡ್ರಿಪ್ಸ್, ಆಕ್ಸಿಜನ್ ಕಿತ್ತೊಗೆದ ಕೋವಿಡ್ ರೋಗಿ ಆಂಬ್ಯುಲೆನ್ಸ್ ನಿಂದಲೇ ಹಾರಿ ಪರಾರಿ! ಜನರಲ್ಲಿ ಆತಂಕ, ತಬ್ಬಿಬ್ಬಾದ ಆರೋಗ್ಯ ಇಲಾಖೆ ಸಿಬ್ಬಂದಿ

 

 

ಸುದ್ದಿ ಕಣಜ.ಕಾಂ
ಹೊಸನಗರ: ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಕರೆತರುವಾಗ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಆಂಬ್ಯುಲೆನ್ಸ್ ನಿಂದಲೇ ಓಡಿ ಪರಾರಿಯಾಗಿದ್ದು, ಹರಸಾಹಸ ಪಟ್ಟು ಆರೋಗ್ಯ ಸಿಬ್ಬಂದಿ ಆತನನ್ನು ಹಿಡಿದು ತಂದಿದ್ದಾರೆ!

https://www.suddikanaja.com/2021/02/11/one-more-tusker-site-in-umblebailu-forest-area-people-panic/

ಹೊಸನಗರ ತಾಲೂಕಿನ ರಿಪ್ಪನಪೇಟೆ ಸಮೀಪದ ಗವಟೂರು ಗ್ರಾಮದಲ್ಲಿ ಘಟನೆ ನಡೆದಿದೆ. ಬುಕ್ಕಿವರೆ ಗ್ರಾಮದ 37 ವರ್ಷ ಪುರುಷ ಓಡಿಹೋಗಿ ಸಿಕ್ಕಿದ್ದಾನೆ.
ಹೊಸನಗರದ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತನ ಆಕ್ಸಿಜನ್ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೆಚ್ಚುವರಿ ಚಿಕಿತ್ಸೆಗೋಸ್ಕರ ಆಂಬ್ಯುಲೆನ್ಸ್ ನಲ್ಲಿ ಶಿವಮೊಗ್ಗಕ್ಕೆ ಕರೆದುಕೊಂಡು ಬರುವಾಗ ಮಲಗಿದ್ದ ರೋಗಿ ಏಕಾಏಕಿ ಎದ್ದು ಆಕ್ಸಿಜನ್, ಡಿಪ್ಸ್ ಕಿತ್ತೊಗೆದು ಕಿರುಚಲು ಆರಂಭಿಸಿದ್ದಾನೆ. ಆಂಬ್ಯುಲೆನ್ಸ್ ಚಾಲಕ ಮತ್ತು ಸಿಬ್ಬಂದಿ ಏನಾಗಿದೆ ಎಂದು ನೋಡಲು ಕೆಳಗಿಳಿದಾಗ ಆಂಬ್ಯುಲೆನ್ಸ್ ನಿಂದ ಹಾರಿ ಓಡಿಹೋಗಿದ್ದಾನೆ. ನಂತರ, ಆತನ ಬೆನ್ನಟ್ಟಿಕೊಂಡು ಹೋಗಿ ಹಿಡಿಯಲಾಗಿದೆ.

ಏಕಾಏಕಿ ಓಡಿಹೋಗಲು ಕಾರಣ | ಕೊರೊನಾದಿಂದ ಮಾನಸಿಕ ಘಾಸಿಗೆ ಒಳಗಾಗಿದ್ದ ಆತ ಚಿಕಿತ್ಸೆಯ ಭಯದಿಂದ ಈ ರೀತಿ ಮಾಡಿರಬಹುದು ಎನ್ನಲಾಗಿದೆ. ಆಂಬ್ಯುಲೆನ್ಸ್ ನಿಂದ ಜಿಗಿದು ಪರಾರಿಯಾಗಿದ್ದ ರೋಗಿ ಮಲ್ಲಾಪುರ ಗ್ರಾಮದಲ್ಲಿ ಅಡಗಿ ಕುಳಿತಿದ್ದ. ಸಾರ್ವಜನಿಕರ ನೆರವಿನೊಂದಿಗೆ ತಿಳಿವಳಿಕೆ ನೀಡಿ ರೋಗಿಯನ್ನು ಮೆಗ್ಗಾನ್ ಗೆ ಕರೆದುಕೊಂಡು ಬರಲಾಗಿದೆ.

https://www.suddikanaja.com/2021/05/15/cm-bs-yadiyurappa-video-conference-with-senior-doctors/

error: Content is protected !!