ಖಡಕ್ ಲಾಕ್‍ಡೌನ್ ನಡುವೆಯೂ ಶಿವಮೊಗ್ಗದಲ್ಲಿ ಕೊರೊನಾ ಸೋಂಕು ಸ್ಫೋಟ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿನ ಸರಪಳಿ ಕಡಿತಗೊಳಿಸುವ ಉದ್ದೇಶದಿಂದ ಜಿಲ್ಲಾಡಳಿತ ಕಟ್ಟುನಿಟ್ಟಿನ ಲಾಕ್‍ಡೌನ್ ನಿಯಮಗಳನ್ನು ಜಾರಿಗೆ ತಂದಿದೆ. ಇದರ ನಡುವೆಯೂ ಶಿವಮೊಗ್ಗ ತಾಲೂಕಿನಲ್ಲಿ ಸೋಂಕಿನ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ.

READ | ಮತ್ತೆ ಕೊರೊನಾ ಸೋಂಕಿತರ ಸಾವಿನಲ್ಲಿ ಏರಿಕೆ, ತಾಲೂಕುವಾರು ಪಾಸಿಟಿವ್ ಸಂಖ್ಯೆ ಇಲ್ಲಿದೆ

ಮಂಗಳವಾರ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಶಿವಮೊಗ್ಗ ತಾಲೂಕಿನಲ್ಲಿ 243 ಜನರಿಗೆ ಸೋಂಕು ತಗುಲಿದೆ. ಇನ್ನುಳಿದಂತೆ, ಭದ್ರಾವತಿ 42, ತೀರ್ಥಹಳ್ಳಿ 15, ಶಿಕಾರಿಪುರ 70, ಸಾಗರ 39, ಹೊಸನಗರ 33, ಸೊರಬ 25 ಹಾಗೂ ಬಾಹ್ಯ ಜಿಲ್ಲೆಯ 18 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಉಳಿದ ತಾಲೂಕುಗಳಲ್ಲಿ ಸೋಂಕು ನಿಯಮಿತವಾಗಿ ಇಳಿಕೆಯಾಗಿದೆ. ಆದರೆ, ಶಿವಮೊಗ್ಗದಲ್ಲಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಪಾಸಿಟಿವ್ ಬರುವ ಸಂಖ್ಯೆ ಕಡಿಮೆಯಾಗಿಲ್ಲ ಎಂಬುವುದು ಅಂಕಿ ಅಂಶಗಳಿಂದ ಸಾಬೀತು ಆಗುತ್ತದೆ.

ಜೂನ್ ತಿಂಗಳ ಮಾಹಿತಿ
ಜೂನ್ 1ರಂದು 275
ಜೂನ್ 2ರಂದು 285
ಜೂನ್ 3ರಂದು 135
ಜೂನ್ 4ರಂದು 211
ಜೂನ್ 5ರಂದು 269
ಜೂನ್ 6ರಂದು 176
ಜೂನ್ 7ರಂದು 147
ಜೂನ್ 8ರಂದು 243

https://www.suddikanaja.com/2021/05/29/one-week-complete-lockdown-in-shivamogga/

error: Content is protected !!