ಸುದ್ದಿ ಕಣಜ.ಕಾಂ
ಭದ್ರಾವತಿ: ಬಿ.ಎಚ್.ರಸ್ತೆಯಲ್ಲಿರುವ ಲೋಯರ್ ಹುತ್ತಾ ಸಮೀಪದ ವೃತ್ತಕ್ಕೆ ಶ್ರೀ ಕ್ಷೇತ್ರ ಆದಿಚುಂದನಗಿರಿ ಮಹಾಸಂಸ್ಥಾನದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಹೆಸರು ಇಡುವಂತೆ ಒತ್ತಾಯ ಕೇಳಿಬಂದಿದೆ.
ಲೋಯರ್ ಹುತ್ತಾ ಸೇರಿದಂತೆ ನಗರದ ವಿವಿಧ ವೃತ್ತಗಳಿಗೆ ನಾಮಕರಣ ಮಾಡಲು ನಗರಸಭೆ ಮುಂದಾಗಿದೆ. ಹೀಗಾಗಿ, ಈ ಒತ್ತಾಯ ಕೇಳಿಬಂದಿದೆ. ವೃತ್ತಗಳಿಗೆ ಹೆಸರಿಡುವಾಗ ದೇಶದ ಆದರ್ಶ ವ್ಯಕ್ತಿಗಳನ್ನು ನಾಮಕರಣ ಮಾಡಬೇಕು ಎಂದು ಮನವಿ ಮಾಡಿದ್ದಾರೆ.